ADVERTISEMENT

ಟಾಟಾ ತೆಕ್ಕೆಗೆ ದೂರಸಂಪರ್ಕ ವಲಯದ ಕಂಪನಿ ತೇಜಸ್ ನೆಟ್‌ವರ್ಕ್ಸ್‌

ಪಿಟಿಐ
Published 29 ಜುಲೈ 2021, 16:09 IST
Last Updated 29 ಜುಲೈ 2021, 16:09 IST

ನವದೆಹಲಿ: ದೂರಸಂಪರ್ಕ ವಲಯದ ಕಂಪನಿ ತೇಜಸ್‌ ನೆಟ್‌ವರ್ಕ್ಸ್‌ನ ಬಹುಪಾಲು ಷೇರುಗಳನ್ನು ಟಾಟಾ ಸನ್ಸ್‌ನ ಅಂಗಸಂಸ್ಥೆಯೊಂದು ಖರೀದಿಸಲಿದೆ. ಹಂತ ಹಂತವಾಗಿ ನಡೆಯಲಿರುವ ಈ ಪ್ರಕ್ರಿಯೆಯು ಒಟ್ಟು ₹ 1,890 ಕೋಟಿ ಮೌಲ್ಯದ್ದು ಎಂದು ತೇಜಸ್‌ ನೆಟ್‌ವರ್ಕ್ಸ್‌ ತಿಳಿಸಿದೆ.

ಟಾಟಾ ಸನ್ಸ್‌ನ ಅಂಗಸಂಸ್ಥೆ ಆಗಿರುವ ಪ್ಯಾನಾಟೋನ್ ಫಿನ್‌ವೆಸ್ಟ್‌ ಕಂಪನಿಯ ಜೊತೆ ತೇಜಸ್ ನೆಟ್‌ವರ್ಕ್ಸ್‌ ಒಪ್ಪಂದಕ್ಕೆ ಸಹಿ ಹಾಕಿದೆ. ‘ಈ ಪಾಲುದಾರಿಕೆಯಿಂದಾಗಿ ನಮಗೆ ಅಗತ್ಯ ಪ್ರಮಾಣದ ಹಣಕಾಸಿನ ಸಂಪನ್ಮೂಲ ಲಭ್ಯವಾಗಲಿದೆ’ ಎಂದು ತೇಜಸ್‌ ನೆಟ್‌ವರ್ಕ್ಸ್‌ನ ಅಧ್ಯಕ್ಷ ವಿ. ಬಾಲಕೃಷ್ಣನ್ ಹೇಳಿದ್ದಾರೆ.

ತೇಜಸ್‌ ನೆಟ್‌ವರ್ಕ್ಸ್‌ ಕಂಪನಿಯು ದೂರಸಂಪರ್ಕ ಸೇವಾ ವಲಯದ ಕಂಪನಿಗಳಿಗೆ, ಅಂತರ್ಜಾಲ ಸೇವೆ ಒದಗಿಸುವವರಿಗೆ ನೆಟ್‌ವರ್ಕ್‌ ಸಂಬಂಧಿತ ಉತ್ಪನ್ನಗಳನ್ನು ಪೂರೈಸುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.