ADVERTISEMENT

ಚಂದ್ರಶೇಖರನ್‌ಗೆ ಇನ್ನೊಂದು ಅವಧಿ: ನಿರ್ಧಾರ ಮುಂದಕ್ಕೆ ಹಾಕಿದ ಟಾಟಾ ಸನ್ಸ್‌

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 14:49 IST
Last Updated 24 ಫೆಬ್ರುವರಿ 2026, 14:49 IST
   

ಮುಂಬೈ: ಎನ್. ಚಂದ್ರಶೇಖರನ್ ಅವರನ್ನು ಮೂರನೆಯ ಅವಧಿಗೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸುವುದಕ್ಕೆ ಸಂಬಂಧಿಸಿದ ತೀರ್ಮಾನವನ್ನು ಟಾಟಾ ಸನ್ಸ್‌ ಆಡಳಿತ ಮಂಡಳಿಯು ಮುಂದಕ್ಕೆ ಹಾಕಿದೆ ಎಂದು ಮೂಲಗಳು ತಿಳಿಸಿವೆ.

ಮಂಡಳಿಯ ಸಭೆಯು ಮಂಗಳವಾರ ನಡೆಯಿತು. ಟಾಟಾ ಸನ್ಸ್‌ನ ಅಧ್ಯಕ್ಷರಾಗಿ ಚಂದ್ರಶೇಖರನ್ ಅವರು ಈಗ ಎರಡನೆಯ ಅವಧಿಯಲ್ಲಿ ಇದ್ದಾರೆ. ಇದು 2027ರ ಫೆಬ್ರುವರಿಯಲ್ಲಿ ಕೊನೆಗೊಳ್ಳಲಿದೆ.

ಸಭೆಯ ನಂತರದಲ್ಲಿ ಯಾವುದೇ ಅಧಿಕೃತ ಪ್ರಕಟಣೆ ಬಂದಿಲ್ಲ. ಆದರೆ ಟಾಟಾ ಟ್ರಸ್ಟ್ಸ್‌ನ ಅಧ್ಯಕ್ಷರಾದ ನೋಯಲ್ ಟಾಟಾ ಅವರು, ಟಾಟಾ ಸಮೂಹದ ಕೆಲವು ಕಂಪನಿಗಳು ನಷ್ಟ ಅನುಭವಿಸಿರುವುದನ್ನು ಸಭೆಯಲ್ಲಿ ಪ್ರಸ್ತಾಪಿಸಿದರು ಎಂದು ಮೂಲಗಳು ವಿವರಿಸಿವೆ.

ADVERTISEMENT

ಆಡಳಿತ ಮಂಡಳಿಯ ಹಲವರು ಚಂದ್ರಶೇಖರನ್ ಅವರನ್ನು ಬೆಂಬಲಿಸಿದರು. ಒಂದು ಕಂಪನಿಗೆ ಆಗಿರುವ ನಷ್ಟ ಆಧರಿಸಿ ಇಡೀ ಸಮೂಹದ ಸಾಧನೆಯನ್ನು ಕಡೆಗಣಿಸಬಾರದು, ಚಂದ್ರಶೇಖರನ್ ಅವರ ಕೊಡುಗೆಯನ್ನು ಮರೆಯಬಾರದು ಎಂದು ಅವರು ಹೇಳಿದರು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.