ADVERTISEMENT

ರಾಜ್ಯದ ತೆರಿಗೆ ಪಾಲು ₹2,660 ಕೋಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2023, 14:44 IST
Last Updated 7 ನವೆಂಬರ್ 2023, 14:44 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ನವದೆಹಲಿ: ಕೇಂದ್ರ ಸರ್ಕಾರವು ಕರ್ನಾಟಕ ಸರ್ಕಾರಕ್ಕೆ ತೆರಿಗೆ ಹಂಚಿಕೆಯ ನವೆಂಬರ್‌ ಕಂತಿನ ರೂಪದಲ್ಲಿ ₹2,660 ಕೋಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಕೇಂದ್ರವು 28 ರಾಜ್ಯಗಳಿಗೆ ಒಟ್ಟು 72,961 ಕೋಟಿ ಬಿಡುಗಡೆಗೊಳಿಸಿದೆ. 

15ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ, ಆರ್ಥಿಕ ವರ್ಷದಲ್ಲಿ ಕೇಂದ್ರ ಸರ್ಕಾರ ಸಂಗ್ರಹಿಸುವ ತೆರಿಗೆಯಲ್ಲಿ ಶೇ 41 ಮೊತ್ತವನ್ನು ರಾಜ್ಯ ಸರ್ಕಾರಗಳಿಗೆ 14 ಕಂತುಗಳಲ್ಲಿ ಹಂಚಿಕೆ ಮಾಡಲಾಗುತ್ತದೆ. 

ADVERTISEMENT

2023–24ರ ಬಜೆಟ್‌ ‍ಪ್ರಕಾರ, ಕೇಂದ್ರ ಸರ್ಕಾರವು ಈ ವರ್ಷವು ರಾಜ್ಯಗಳಿಗೆ ₹10.21 ಲಕ್ಷ ಕೋಟಿ ವರ್ಗಾಯಿಸುವ ನಿರೀಕ್ಷೆ ಇದೆ. ಹಾಗಾಗಿ, ಪ್ರತಿ ಕಂತಿನ ಸರಾಸರಿ ಮೊತ್ತ ₹72.916 ಕೋಟಿ ಆಗಲಿದೆ. ಕೇಂದ್ರದ ಆದಾಯವು ಸುಧಾರಿಸಿದಂತೆ ಕಂತಿನ ಮೊತ್ತ ಸಹ ಹೆಚ್ಚಾಗಲಿದೆ.

ಮುಂಬರುವ ಹಬ್ಬದ ಋತುವಿನ ದೃಷ್ಟಿಯಿಂದ ನವೆಂಬರ್‌ 10ರ ಬದಲು ನವೆಂಬರ್‌ 7ರಂದೇ ಹಣ ಬಿಡುಗಡೆ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.