ADVERTISEMENT

ಐ.ಟಿ ರಿಟರ್ನ್‌ ಸಲ್ಲಿಕೆ ಶೇ 1 ಇಳಿಕೆ

​ಪ್ರಜಾವಾಣಿ ವಾರ್ತೆ
Published 3 ಮೇ 2019, 20:16 IST
Last Updated 3 ಮೇ 2019, 20:16 IST
   

ಮುಂಬೈ: 2018–19ನೇ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಕೆಯಲ್ಲಿ (ಐಟಿಆರ್‌) ಶೇ 1ರಷ್ಟು ಇಳಿಕೆ ಕಂಡು ಬಂದಿದೆ ಎಂದು ದಲ್ಲಾಳಿ ಸಂಸ್ಥೆ ಕೋಟಕ್‌ ಸೆಕ್ಯುರಿಟೀಸ್‌ ಹೇಳಿದೆ.

2018–19ರಲ್ಲಿ 6.68 ಕೋಟಿ ರಿಟರ್ನ್ಸ್‌ ಸಲ್ಲಿಕೆಯಾಗಿದೆ. 2017–18ರಲ್ಲಿ ಇದು 6.75 ಕೋಟಿ ಇತ್ತು ಎಂದು ತಿಳಿಸಿದೆ.

ನೋಟು ರದ್ದತಿ ಬಳಿಕ ತೆರಿಗೆ ಪಾವತಿದಾರರ ಸಂಖ್ಯೆಯಲ್ಲಿ ಏರಿಕೆಯಾಗಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಇಳಿಕೆ ಕಂಡಿರುವುದು ಅಚ್ಚರಿ ಮೂಡಿಸಿದೆ. ಈ ರೀತಿಯ ಬೆಳವಣಿಗೆಯಿಂದ ವಿತ್ತೀಯ ಕೊರತೆ ಗುರಿ ತಲುಪಲು ಕಷ್ಟವಾಗಲಿದೆ ಎಂದು ಸಂಸ್ಥೆ ಎಚ್ಚರಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.