ADVERTISEMENT

ದೂರಸಂಪರ್ಕ ವರಮಾನ ಹೆಚ್ಚಳ ನಿರೀಕ್ಷೆ

ಪಿಟಿಐ
Published 30 ಆಗಸ್ಟ್ 2020, 16:19 IST
Last Updated 30 ಆಗಸ್ಟ್ 2020, 16:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ಪ್ರತಿ ಬಳಕೆದಾರರಿಂದ ಬರುವ ಸರಾಸರಿ ವರಮಾನದಲ್ಲಿ ಏರಿಕೆ ಆಗಿರುವುದರಿಂದ ದೂರಸಂಪರ್ಕ ವಲಯದ ವರಮಾನವು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡ 14ರಿಂದ ಶೇ 15ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಸೆಲ್ಯುಲಾರ್‌ ಆಪರೇಟರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ (ಸಿಒಎಐ) ಹೇಳಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಗ್ರಾಹಕರ ಸಂಖ್ಯೆಯಲ್ಲಿ ಯಾವುದೇ ಏರಿಕೆ ಕಂಡುಬರುವುದಿಲ್ಲ ಎಂದು ಅದು ತಿಳಿಸಿದೆ. ಒಂದು ತಿಂಗಳಿಗೆ ಒಬ್ಬ ಗ್ರಾಹಕ ಬಳಸುವ ಡೇಟಾ ಪ್ರಮಾಣವು ಮುಂದಿನ ವರ್ಷ 12 ಜಿಬಿಯಿಂದ 15ಜಿಬಿಗೆ ಏರಿಕೆಯಾಗಲಿದೆ.

‘ಸ್ಪೆಕ್ಟ್ರಂ ಬಳಕೆ ಶುಲ್ಕ ಮತ್ತು ಪರವಾನಗಿ ಶುಲ್ಕದಲ್ಲಿ ಇಳಿಕೆ, ಪರವಾನಗಿ ಮತ್ತು ಸ್ಪೆಕ್ಟ್ರಂ ಶುಲ್ಕಕ್ಕೆ ಜಿಎಸ್‌ಟಿ ವಿನಾಯಿತಿಯಂತಹ ಕ್ರಮಗಳ ಮೂಲಕ ಹಣಕಾಸಿನ ಒತ್ತಡ ತಗ್ಗಿಸುವ ಪ್ರಯತ್ನ ನಡೆಸಲಾಗುತ್ತಿದೆ’ ಎಂದು ಸಿಒಎಐನ ಪ್ರಧಾನ ನಿರ್ದೇಶಕ ಎಸ್‌.ಪಿ. ಕೊಚ್ಚಾರ್‌ ಪ್ರತಿಪಾದಿಸಿದ್ದಾರೆ.

ADVERTISEMENT

ಸೇವಾ ಶುಲ್ಕ ಹೆಚ್ಚಿಸುವ ಬಗ್ಗೆ ಕಂಪನಿಗಳಿಂದ ಯಾವುದೇ ಸೂಚನೆಯೂ ಬಂದಿಲ್ಲ ಎಂದು ಕೊಚ್ಚಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.