
ಬೆಂಗಳೂರು: ಬೆಂಗಳೂರಿನ ಕೂಡ್ಲು ಗೇಟ್ ಬಳಿ ಇರುವ ‘ಎಕೊ ಡ್ರೈವ್’ ಸೇವಾ ಕೇಂದ್ರದಲ್ಲಿ ಟೆಸ್ಲಾ ಕಂಪನಿಯ ‘ಮಾಡೆಲ್ ವೈ’ ಪ್ರದರ್ಶನ ಜನವರಿ 15ರಿಂದ 31ರವರೆಗೆ ಇರಲಿದ್ದು, ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ ಎಂದು ‘ಎಕೊ’ ಕಾರ್ಯನಿರ್ವಾಹಕ ಉಪಾಧ್ಯಕ್ಷ ಆಶಿಶ್ ಮಿಶ್ರಾ ಹೇಳಿದ್ದಾರೆ.
ನಗರದಲ್ಲಿ ಇದೇ ಮೊದಲ ಬಾರಿಗೆ, ಟೆಸ್ಲಾದ ‘ಮಾಡೆಲ್ ವೈ’ ವಾಹನವನ್ನು ವೀಕ್ಷಿಸಬಹುದಾಗಿದೆ. ಈ ಪ್ರದರ್ಶನದಲ್ಲಿ ಟೆಸ್ಲಾ ಕಂಪನಿಯ ತಜ್ಞರು ಸಂದರ್ಶಕರಿಗೆ ವಾಹನದ ವೈಶಿಷ್ಟ್ಯ, ವಿನ್ಯಾಸ, ತಂತ್ರಜ್ಞಾನ ಸೇರಿದಂತೆ ವಿವಿಧ ಮಾಹಿತಿ ನೀಡಲಿದ್ದಾರೆ.
ಆಸಕ್ತ ಗ್ರಾಹಕರು ವಾಹನದ ಟೆಸ್ಟ್ ಡ್ರೈವ್ ಸಹ ಮಾಡಬಹುದಾಗಿದೆ. ಇದಕ್ಕಾಗಿ ಟೆಸ್ಲಾ ಇಂಡಿಯಾ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಈ ವಾಹನವು ಅತ್ಯುತ್ತಮ ಸುರಕ್ಷತಾ ರೇಟಿಂಗ್ ಮತ್ತು ತ್ವರಿತ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.