ADVERTISEMENT

ಥರ್ಡ್‌ ಪಾರ್ಟಿ ವಿಮೆ ಹೆಚ್ಚಳ

ಇದೇ 16ರಿಂದ ಜಾರಿ: ವಿಮೆ ನಿಯಂತ್ರಣ ಪ್ರಾಧಿಕಾರದ ಆದೇಶ

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 19:45 IST
Last Updated 6 ಜೂನ್ 2019, 19:45 IST
car
car   

ನವದೆಹಲಿ (ಪಿಟಿಐ): ಕಾರ್‌, ದ್ವಿಚಕ್ರ ವಾಹನ ಮತ್ತು ಸಾರಿಗೆ ವಾಹನಗಳ ಥರ್ಡ್‌ಪಾರ್ಟಿ (ಟಿಪಿ) ವಿಮೆಯ ಕಂತು ಇದೇ 16ರಿಂದ ಹೆಚ್ಚಳಗೊಳ್ಳಲಿದೆ.

ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) 2019–20ನೆ ಹಣಕಾಸು ವರ್ಷದ ವಿಮೆ ಕಂತು ಹೆಚ್ಚಳ ಸಂಬಂಧ ಆದೇಶ ಹೊರಡಿಸಿದೆ.

ಕಂತು ಹೆಚ್ಚಳ ಸಂಬಂಧ ಪ್ರಾಧಿಕಾರವು ಇದಕ್ಕೂ ಮೊದಲು ಕರಡು ಪ್ರಸ್ತಾವ ಸಿದ್ಧಪಡಿಸಿ ಉದ್ದಿಮೆಯ ವಿವಿಧ ಪಾಲುದಾರರಿಂದ ಅಭಿಪ್ರಾಯಗಳನ್ನು ಆಹ್ವಾನಿಸಿತ್ತು.

ADVERTISEMENT

ಹೊಸ ಕಾರ್‌ಗಳಿಗೆ 3 ವರ್ಷಗಳವರೆಗಿನ ಅವಧಿಗೆ ಮತ್ತು ಹೊಸ ದ್ವಿಚಕ್ರ ವಾಹನಗಳಿಗೆ 5 ವರ್ಷಗಳವರೆಗೆ ಒಂದು ಬಾರಿಗೆ ಪಾವತಿಸುವ ‘ಟಿಪಿ’ ಕಂತು ‘ಸಿಸಿ’ ಆಧರಿಸಿ ಕ್ರಮವಾಗಿ ₹ 5,286 ರಿಂದ ₹ 24,305ರವರೆಗೆ ಮತ್ತು ₹ 1,045 ರಿಂದ ₹ 13,034ರಷ್ಟು ಇರಲಿದೆ.

ಒಕ್ಕೂಟದ ಆತಂಕ: ಥರ್ಡ್‌ ಪಾರ್ಟಿ ವಾಹನ ವಿಮೆ ಕಂತು ಹೆಚ್ಚಳವು ವಾಹನಗಳ ಮಾರಾಟದ ಮೇಲೆ ಇನ್ನಷ್ಟು ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ವಾಹನ ವಿತರಕರ ಸಂಘದ ಒಕ್ಕೂಟವು (ಎಫ್‌ಎಡಿಎ) ಆತಂಕ ವ್ಯಕ್ತಪಡಿಸಿದೆ.

‘ದೇಶಿ ವಾಹನ ತಯಾರಿಕಾ ಉದ್ದಿಮೆಯು ಈಗಾಗಲೇ ಮಾರಾಟ ಕುಸಿತ ಆತಂಕ ಎದುರಿಸುತ್ತಿರುವಾಗ ಹಠಾತ್ತಾಗಿ ವಿಮೆ ದರ ಹೆಚ್ಚಿಸಿರುವುದು ವಾಹನಗಳ ಅದರಲ್ಲೂ ವಿಶೇಷವಾಗಿ ದ್ವಿಚಕ್ರ ವಾಹನಗಳ ಮಾರಾಟ ತಗ್ಗಿಸಲಿದೆ’ ಎಂದು ಒಕ್ಕೂಟದ ಗೌರವ ಕಾರ್ಯದರ್ಶಿ ಮನೀಷ್‌ ರಾಜ್‌ ಸಿಂಘಾನಿಯಾ ಹೇಳಿದ್ದಾರೆ.

ಮಾಹಿತಿಗೆ ವಿಮೆ ಪ್ರಾಧಿಕಾರದ ಅಂತರ್ಜಾಲ ತಾಣಕ್ಕೆ https://www.irdai.gov.in/ADMINCMS/cms/frmOrders_Layout.aspx?page=PageNo3827 ಭೇಟಿ
ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.