ಬೆಂಗಳೂರು: ವಿಶ್ವದ ಐದನೇ ಅತಿದೊಡ್ಡ ಕೈಗಡಿಯಾರ ನಿರ್ಮಾಣ ಕಂಪನಿಯಾಗಿರುವ ಟೈಟನ್ ಕಂಪನಿಯು ಅಮೆರಿಕದ ವಾಚ್ ತಯಾರಿಕಾ ಕಂಪನಿ ‘ಎಫ್‍ಟಿಎಸ್ ಯುಎಸ್‍ಎ ಎಲ್‍ಎಲ್‍ಸಿ’ ಜೊತೆ ಒಪ್ಪಂದ ಮಾಡಿಕೊಂಡಿದೆ.
ಒಪ್ಪಂದದಡಿ ‘ಎಫ್‍ಟಿಎಸ್ ಯುಎಸ್‍ಎ’ಗೆ ಟೈಟನ್ ಕಿಟ್ಸ್ ಪೂರೈಸಲಿದ್ದು ಜೋಡಣಾ ಸೌಲಭ್ಯಗಳನ್ನು ಒದಗಿಸಲಿದೆ. ಅಮೆರಿಕದ ಎಂಜಿನಿಯರ್‌ಗಳಿಗೆ ತರಬೇತಿಯನ್ನೂ ನೀಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.