ಬೆಂಗಳೂರು: ದೇಶದ ಕನ್ನಡಕ ತಯಾರಿಕಾ ಕಂಪನಿಯಾದ ಟೈಟನ್ ಐ–ಪ್ಲಸ್, ಆಕರ್ಷಕ ಫ್ರೇಮ್, ಲೆನ್ಸ್, ಸನ್‌ಗ್ಲಾಸಸ್ ಮತ್ತು ಕಾಂಟ್ಯಾಕ್ಟ್ ಲೆನ್ಸ್ ಮೇಲೆ ಬೇಸಿಗೆಯ ಆಕರ್ಷಕ ರಿಯಾಯಿತಿಯನ್ನು ಪ್ರಕಟಿಸಿದೆ.
₹750ಕ್ಕೆ ಫ್ಯಾಷನ್ ಫ್ರೇಮ್ ಮತ್ತು ಬ್ಲ್ಯೂ ಸೇಫ್ ಲೆನ್ಸ್, ₹500ಕ್ಕೆ ಆ್ಯಂಟಿ–ರಿಫ್ಲೆಕ್ಟಿವ್ ಲೆನ್ಸ್, ₹1,799ಕ್ಕೆ ಪ್ರೊಗ್ರೆಸ್ಸಿವ್ ಲೆನ್ಸ್‌ನಂತಹ ಬಹು ಮಾದರಿಯ ಲೆನ್ಸ್‌ಗಳ ಆಯ್ಕೆ ಸೌಲಭ್ಯವಿದೆ ಎಂದು ಕಂಪನಿ ತಿಳಿಸಿದೆ.
ಬಾಲಕ ಮತ್ತು ಬಾಲಕಿಯರಿಗೆ ₹999ಕ್ಕೆ ಕನ್ನಡಕಗಳು ಲಭ್ಯವಿವೆ ಎಂದು ಹೇಳಿದೆ.
ಫ್ರೇಮ್‌ಗಳು ಜಿಯೂಮೆಟ್ರಿಕಲ್, ಸ್ಲಿಮ್, ಓವರ್‌ಸೈಜ್ಡ್, ಕ್ಯಾಟ್–ಐ, ಪಾರದರ್ಶಕ, ದುಂಡಗಿನ ಮತ್ತು ಚೌಕಾಕಾರದ ಶೈಲಿಯಲ್ಲಿವೆ. ಎಲ್ಲರ ಅಭಿರುಚಿಗೆ ತಕ್ಕಂತೆ ತಯಾರಿಸಲಾಗಿದೆ. 20ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಬ್ರ್ಯಾಂಡ್‌ಗಳು ಮತ್ತು ವೈವಿಧ್ಯಮಯ ಆಯ್ಕೆಗಳ ಮೇಲೆ ಶೇ 20ರಷ್ಟು ರಿಯಾಯಿತಿ ಸೌಲಭ್ಯವಿದೆ ಎಂದು ತಿಳಿಸಿದೆ.
ಗ್ರಾಹಕರು ಕಂಪನಿಯ ಮಳಿಗೆ ಅಥವಾ ವೆಬ್‌ಸೈಟ್‌ನಲ್ಲಿ ಖರೀದಿಸಬಹುದಾಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.