ADVERTISEMENT

ದೆಹಲಿಯಲ್ಲಿ ಕೆ.ಜಿ. ಟೊಮೆಟೊಗೆ ₹80

ಪಿಟಿಐ
Published 10 ಅಕ್ಟೋಬರ್ 2019, 2:39 IST
Last Updated 10 ಅಕ್ಟೋಬರ್ 2019, 2:39 IST
   

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ತರಕಾರಿಗಳ ಬೆಲೆ ಏರಿಕೆ ಸರದಿಯಲ್ಲಿ ಈರುಳ್ಳಿ ಬಳಿಕ ಇದೀಗ ಟೊಮೆಟೊ ಬಂದಿದೆ. ಬುಧವಾರ ಪ್ರತಿ ಕೆ.ಜಿ ಬೆಲೆ₹ 80ಕ್ಕೆ ತಲುಪಿದೆ.

ಕರ್ನಾಟಕವನ್ನೂ ಒಳಗೊಂಡು ಟೊಮೆಟೊ ಬೆಳೆಯುವ ರಾಜ್ಯಗಳಲ್ಲಿ ಪ್ರವಾಹ ಸ್ಥಿತಿ ಎದುರಾಗಿದ್ದರಿಂದ ಪೂರೈಕೆಯಲ್ಲಿ ಕೊರತೆ ಆಗಿದೆ. ಇದರಿಂದಾಗಿ ಕೆಲವು ದಿನಗಳಿಂದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ ಎಂದು ಆಜಾದ್‌ ಪುರ ಮಂಡಿಯ ಸಗಟುವರ್ತಕರೊಬ್ಬರು ಹೇಳಿದ್ದಾರೆ.

ಸಫಲ್‌ ಮಳಿಗೆಗಳಲ್ಲಿ ಕೆ.ಜಿಗೆ ₹ 58ರಂತೆ ಮಾರಾಟ ಮಾಡಲಾಗುತ್ತಿದೆ. ಆದರೆ, ಸ್ಥಳೀಯ ವ್ಯಾಪಾರಿಗಳು ಗುಣಮಟ್ಟದ ಆಧಾರದ ಮೇಲೆ ಕೆ.ಜಿಗೆ ₹ 60 ರಿಂದ ₹ 80ರವರೆಗೂ ಮಾರಾಟ ಮಾಡುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.