ADVERTISEMENT

ಕಾರ್ಮಿಕ ಸಂಘಟನೆಗಳ ಪ್ರತಿಭಟನೆ

ಪಿಟಿಐ
Published 2 ಫೆಬ್ರುವರಿ 2021, 16:40 IST
Last Updated 2 ಫೆಬ್ರುವರಿ 2021, 16:40 IST

ನವದೆಹಲಿ: ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಪ್ರಸ್ತಾಪಿಸಿರುವ ಖಾಸಗೀಕರಣ ಹಾಗೂ ಇತರ ಕೆಲವು ‘ಜನವಿರೋಧಿ ನೀತಿ’ಗಳನ್ನು ವಿರೋಧಿಸಿ ಬುಧವಾರ ರಾಷ್ಟ್ರದಾದ್ಯಂತ ಪ್ರತಿಭಟನೆ ನಡೆಸುವುದಾಗಿ ಒಟ್ಟು ಹತ್ತು ಕಾರ್ಮಿಕ ಸಂಘಟನೆಗಳು ಹೇಳಿವೆ.

ಕಾರ್ಮಿಕ ಸಂಹಿತೆಯನ್ನು ತಿರಸ್ಕರಿಸುವಂತೆ ಒತ್ತಾಯಿಸುವುದು, ಬಡ ಕಾರ್ಮಿಕರ ಕುಟುಂಬಗಳಿಗೆ ಆಹಾರ ಹಾಗೂ ಆದಾಯದ ನೆರವು ನೀಡಬೇಕು ಎಂದು ಆಗ್ರಹಿಸುವುದು ಕೂಡ ಪ್ರತಿಭಟನೆಯ ಭಾಗವಾಗಿರುತ್ತದೆ ಎಂದು ಅವು ಹೇಳಿವೆ. ಪ್ರತಿಭಟನೆಯ ಭಾಗವಾಗಿ ಕಾರ್ಮಿಕ ಸಂಹಿತೆಯ ಪ್ರತಿಗಳನ್ನು ಸುಡಲಾಗುವುದು ಎಂದು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT