ADVERTISEMENT

ಪ್ರೆಸ್ಟೀಜ್‌ನಲ್ಲಿ ಕೊಡುಗೆಗಳು

​ಪ್ರಜಾವಾಣಿ ವಾರ್ತೆ
Published 31 ಮೇ 2022, 16:39 IST
Last Updated 31 ಮೇ 2022, 16:39 IST

ಬೆಂಗಳೂರು: ಟಿಟಿಕೆ ಪ್ರೆಸ್ಟೀಜ್ ಕಂಪನಿಯು ಹಳೆಯ ಪಾತ್ರೆಗಳನ್ನು ಬದಲಾಯಿಸಿಕೊಳ್ಳುವ ಕೊಡುಗೆ ನೀಡಿದೆ. ಇದು ಜುಲೈ 31ರವರೆಗೆ ಜಾರಿಯಲ್ಲಿ ಇರಲಿದೆ.

ಗ್ರಾಹಕರು ತಮ್ಮ ಹಳೆಯ ಪಾತ್ರೆಗಳು ಹಾಗೂ ಅಡುಗೆ ಸಲಕರಣೆಗಳನ್ನು ಹೊಸ ಪಾತ್ರೆಗಳೊಂದಿಗೆ ಬದಲಾವಣೆ ಮಾಡಿಕೊಳ್ಳಬಹುದು. ಹೀಗೆ ಬದಲಾಯಿಸಿಕೊಳ್ಳುವಾಗ ಶೇಕಡ 25ರಿಂದ ಶೇ 60ರವರೆಗೆ ರಿಯಾಯಿತಿ ಸಿಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಗೃಹಿಣಿಯರು ಹಳೆಯ ಪ್ರೆಷರ್ ಕುಕ್ಕರ್‌ಗಳನ್ನು ಹೊಸ ಸ್ವಚ್ಛ್ ಸರಣಿಯ ಕುಕ್ಕರ್‌ಗಳಿಗೆ ಬದಲಾಯಿಸಿಕೊಳ್ಳಬಹುದು. ಗ್ಯಾಸ್ ಒಲೆಗಳ ಮೇಲೆ ಶೇ 33ರಿಂದ ಶೇ 45ರವರೆಗೆ ರಿಯಾಯಿತಿ ಇರಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.