ADVERTISEMENT

ಮಾರುಕಟ್ಟೆಗೆ ಟರ್ಬೊಸ್ಟೀಲ್‌ ಕಂಬಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2019, 19:49 IST
Last Updated 11 ಮಾರ್ಚ್ 2019, 19:49 IST
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ಚಂದ್ರ ರಾಮಮೂರ್ತಿ ಮತ್ತು ಪ್ರಚಾರ ರಾಯಭಾರಿ ರಮೇಶ್ ಅರವಿಂದ್ ಅವರು ಟರ್ಬೊಸ್ಟೀಲ್‌ ಕಂಬಿಗಳನ್ನು ಪರಿಚಯಿಸಿದರು
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ಚಂದ್ರ ರಾಮಮೂರ್ತಿ ಮತ್ತು ಪ್ರಚಾರ ರಾಯಭಾರಿ ರಮೇಶ್ ಅರವಿಂದ್ ಅವರು ಟರ್ಬೊಸ್ಟೀಲ್‌ ಕಂಬಿಗಳನ್ನು ಪರಿಚಯಿಸಿದರು   

ಬೆಂಗಳೂರು: ಉನ್ನತ ದರ್ಜೆ ಉಕ್ಕಿನ ಕಂಬಿಗಳಿಗೆ ಎಲ್‌ಪಿಎಸ್ (ಕಡಿಮೆ ಫಾಸ್ಫರಸ್ ಹಾಗೂ ಸಲ್ಫರ್) ತಂತ್ರಜ್ಞಾನ ಬಳಸಿರುವ ಟರ್ಬೋಸ್ಟೀಲ್ ಎಲ್‌ಪಿಎಸ್‌ಟಿಎಂಟಿ ಕಂಬಿ (ಸ್ಟೀಲ್‌ ರಾಡ್‌) ಗಳನ್ನು ರಾಜ್ಯದ ಮಾರುಕಟ್ಟೆಗೆ ಪರಿಚಯಿಸಲಾಗಿದೆ.

‘ಈ ಕಂಬಿಗಳ ತಯಾರಿಕೆಯಲ್ಲಿನ ತಂತ್ರಜ್ಞಾನ ಶ್ರೇಷ್ಠತೆ ಇತರ ಉತ್ಪನ್ನಗಳಿಗಿಂತ ಎದ್ದು ಕಾಣುವ ಪ್ರತ್ಯೇಕತೆ, ಮೇಲ್ಮೈ, ಹೊಳಪು ಮತ್ತು ಉಬ್ಬು (ರಿಬ್) ವಿನ್ಯಾಸ ಅಸಾಮಾನ್ಯವೆನಿಸಿದೆ. ನಿರ್ಮಾಣ ಉದ್ಯಮ ತಜ್ಞರಿಂದ ಮೆಚ್ಚುಗೆ ಗಳಿಸಿದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ಚಂದ್ರ ರಾಮಮೂರ್ತಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಚಿತ್ರದುರ್ಗ ಜಿಲ್ಲೆಯಲ್ಲಿ ತಯಾರಿಕಾ ಘಟಕ ಹೊಂದಿರುವ ಪ್ರಕಾಶ್ ಸ್ಪಾಂಜ್ ಐರನ್ ಆಂಡ್ ಪವರ್ ಪ್ರೈವೇಟ್ ಲಿಮಿಟೆಡ್, ಟರ್ಬೋಸ್ಟೀಲ್ ಜನಪ್ರಿಯ ಬ್ರ್ಯಾಂಡ್‌ ಹೆಸರಿನಲ್ಲಿ ವಿಶ್ವ ದರ್ಜೆಯ ಗುಣಮಟ್ಟದ ಉಕ್ಕಿನ ಕಂಬಿಗಳನ್ನು ತಯಾರಿಸುತ್ತಿದೆ. ರಾಜ್ಯದಲ್ಲಿ 100ಕ್ಕೂ ಹೆಚ್ಚು ಡೀಲರ್‌ಗಳಿದ್ದು, ಈ ಉತ್ಪನ್ನವನ್ನು ಶೀಘ್ರದಲ್ಲೇ ಇತರ ರಾಜ್ಯಗಳಿಗೆ ಪರಿಚಯಿಸುವ ಯೋಜನೆ ಇದೆ’ ಎಂದರು. ಉತ್ಪನ್ನದ ಪ್ರಚಾರ ರಾಯಭಾರಿ ರಮೇಶ್ ಅರವಿಂದ್ ಮಾತನಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.