ADVERTISEMENT

ಟಿವಿಎಸ್‌ನಿಂದ ‘ಐಕ್ಯೂಬ್‌ ಎಲೆಕ್ಟ್ರಿಕ್‌’ ಸ್ಕೂಟರ್‌ ಬಿಡುಗಡೆ: ಏನಿದರ ವಿಶೇಷತೆ?

​ಪ್ರಜಾವಾಣಿ ವಾರ್ತೆ
Published 25 ಜನವರಿ 2020, 19:42 IST
Last Updated 25 ಜನವರಿ 2020, 19:42 IST
   

ಬೆಂಗಳೂರು: ಟಿವಿಎಸ್‌ ಮೋಟರ್‌ ಕಂಪನಿಯು ರಾಜ್ಯದ ಮಾರುಕಟ್ಟೆಗೆ ವಿದ್ಯುತ್‌ ಚಾಲಿತ ಸ್ಕೂಟರ್‌ ‘ಐಕ್ಯೂಬ್‌ ಎಲೆಕ್ಟ್ರಿಕ್‌’ ಬಿಡುಗಡೆ ಮಾಡಿದೆ. ಬೆಂಗಳೂರಿನಲ್ಲಿ ಆನ್‌ ರೋಡ್‌ ಬೆಲೆ ₹ 1.15 ಲಕ್ಷ ಇದೆ.

ಬೆಂಗಳೂರಿನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಮತ್ತು ಟಿವಿಎಸ್‌ ಕಂಪನಿಯ ಅಧ್ಯಕ್ಷ ವೇಣು ಶ್ರೀನಿವಾಸನ್‌ ಅವರು ಸ್ಕೂಟರ್‌ ಬಿಡುಗಡೆ ಮಾಡಿದರು.

ಟಿವಿಎಸ್‌ ಸ್ಮಾರ್ಟ್‌ ಕನೆಕ್ಟ್‌ ಸೌಲಭ್ಯ ಅಳವಡಿಸಲಾಗಿದ್ದು, ಜಿಯೊ ಫೆನ್ಸಿಂಗ್‌, ರಿಮೋಟ್‌ ಬ್ಯಾಟರಿ ಚಾರ್ಜಿಂಗ್‌ ನ್ಯಾವಿಗೇಷನ್‌ನಂತಹ ಹಲವು ವೈಶಿಷ್ಟ್ಯಗಳಿವೆ.

ADVERTISEMENT

‘ಗ್ರಾಹಕ ಕೇಂದ್ರಿತ ನಾವೀನ್ಯತೆಗೆ ಕಂಪನಿಯು ಹೆಚ್ಚಿನ ಗಮನ ನೀಡುತ್ತಿದೆ. ನಮ್ಮ ಯುವ ಸಮೂಹಕ್ಕೆ ಪರಿಸರ ಸ್ನೇಹಿ ಮತ್ತು ಸಂಪರ್ಕಿತ ವಾಹನ ನೀಡುವುದು ನಮ್ಮ ಆದ್ಯತೆಯಾಗಿದೆ. ಟಿವಿಎಸ್ ಐಕ್ಯೂಬ್ ಅತ್ಯಾಧುನಿಕ ಎಲೆಕ್ಟ್ರಿಕ್‌ ಡ್ರೈವ್‍ಟ್ರೈನ್‍ ಮತ್ತು ಮುಂದಿನ ಪೀಳಿಗೆಯ ಟಿವಿಎಸ್ ಸ್ಮಾರ್ಟ್‌ಕನೆಕ್ಟ್‌ ಪ್ಲಾಟ್‍ಫಾರಂನ ಸಂಯೋಜನೆಯಾಗಿದೆ’ ಎಂದು ಶ್ರೀನಿವಾಸನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.