ADVERTISEMENT

ಟಿವಿಎಸ್‌ ಲಾಭ ಶೇ 42ರಷ್ಟು ಏರಿಕೆ

ಪಿಟಿಐ
Published 28 ಅಕ್ಟೋಬರ್ 2025, 16:11 IST
Last Updated 28 ಅಕ್ಟೋಬರ್ 2025, 16:11 IST
<div class="paragraphs"><p>ಟಿವಿಎಸ್‌</p></div>

ಟಿವಿಎಸ್‌

   

ನವದೆಹಲಿ: ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಟಿವಿಎಸ್‌ ಮೋಟರ್ ಕಂಪನಿಯ ನಿವ್ವಳ ಲಾಭವು ಶೇಕಡ 42ರಷ್ಟು ಹೆಚ್ಚಾಗಿ ₹832 ಕೋಟಿಗೆ ತಲುಪಿದೆ. ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯು ₹588 ಕೋಟಿ ಲಾಭ ಕಂಡಿತ್ತು.

ಕಾರ್ಯಾಚರಣೆ ವರಮಾನವು ಕಳೆದ ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ₹11,197 ಕೋಟಿ ಇದ್ದಿದ್ದು ಈ ಬಾರಿ ₹14,051 ಕೋಟಿಗೆ ಹೆಚ್ಚಳ ಆಗಿದೆ ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

ADVERTISEMENT

ಇದೇ ವೇಳೆ ಕಂಪನಿಯ ವೆಚ್ಚಗಳು ಕೂಡ ಏರಿಕೆ ಆಗಿವೆ. ಕಳೆದ ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ₹10,332 ಕೋಟಿ ಇದ್ದ ವೆಚ್ಚಗಳು ಈ ಬಾರಿ ₹12,801 ಕೋಟಿಗೆ ತಲುಪಿವೆ.

ಕಂಪನಿಯ ದ್ವಿಚಕ್ರ ವಾಹನ ಹಾಗೂ ತ್ರಿಚಕ್ರ ವಾಹನಗಳ ಮಾರಾಟ ಪ್ರಮಾಣವು ಶೇ 23ರಷ್ಟು ಹೆಚ್ಚಳ ಕಂಡಿವೆ. ಕಂಪನಿಯು ಈ ತ್ರೈಮಾಸಿಕದಲ್ಲಿ ಒಟ್ಟು 15.07 ವಾಹನಗಳನ್ನು ಮಾರಾಟ ಮಾಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.