ADVERTISEMENT

ಹೆಚ್ಚು ಕೆಲಸ ಮಾಡಿ, ಇಲ್ಲವೇ ಮನೆಗೆ ನಡೀರಿ: ಟ್ವಿಟರ್‌ ನೌಕರರಿಗೆ ಮಸ್ಕ್‌ ತಾಕೀತು

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2022, 5:27 IST
Last Updated 17 ನವೆಂಬರ್ 2022, 5:27 IST
   

‌ನವದೆಹಲಿ: ಟ್ವಿಟರ್‌ ಸ್ವಾಧೀನದ ಬಳಿಕ ಅರ್ಧದಷ್ಟು ಉದ್ಯೋಗಿಗಳನ್ನು ವಜಾ ಮಾಡಿದ್ದ ನೂತನ ಮಾಲೀಕ ‌ಇಲಾನ್‌ ಮಸ್ಕ್‌ ಇದೀಗ, ಹೆಚ್ಚು ಅವಧಿಕೆಲಸ ಮಾಡಿ ಇಲ್ಲವೇ ಮನೆಗೆ ನಡೀರಿ ಎಂದು ತಾಕೀತು ಮಾಡಿದ್ದಾರೆ.

‘ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡಿ ಇಲ್ಲವೇ ಕೆಲಸ ಬಿಡಿ‘ ಎಂದು ಟ್ವಿಟರ್‌ ನೌಕರರಿಗೆ ಹಾಕಿದ ಇಮೇಲ್‌ನಲ್ಲಿ ಮಸ್ಕ್‌ ಹೇಳಿದ್ದಾರೆ.

ಕೆಲಸದಲ್ಲಿ ಉಳಿಯಬೇಕಾದರೆ ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುವ ಪ್ರತಿಜ್ಞೆ ಮಾಡಿ. ತೀವ್ರವಾಗಿ ಕೆಲಸ ಮಾಡಿ. ಟ್ವಟರ್‌ ಯಶಸ್ವಿಯಾಗಬೇಕಿದ್ದರೆ ಕಠಿಣ ಪರಿಶ್ರಮ ಪಡಬೇಕು‘ ಎಂದು ಅವರು ಹೇಳಿದ್ದಾರೆ.

ADVERTISEMENT

ಇಮೇಲ್‌ಗೆ ಕಳಿಸಿರುವ ಲಿಂಕ್‌ ಮೂಲಕ ಸಂಜೆ 5 ಗಂಟೆ (ವಾಷಿಂಗ್ಟನ್‌ ಸಮಯ)ಯ ಒಳಗಾಗಿ ಉ‌ತ್ತರಿಸಿ ಎಂದು ಉದ್ಯೋಗಿಗಳಿಗೆ ನಿರ್ದೇಶನ ನೀಡಲಾಗಿದೆ.

‘ನೀವು ಯಾವ ನಿರ್ಧಾರ ಬೇಕಾದರೂ ತೆಗೆದುಕೊಳ್ಳಿ, ಟ್ವಿಟರ್‌ ಅನ್ನು ಯಶಸ್ವಿಗೊಳಿಸುವ ನಿಮ್ಮ ಪರಿಶ್ರಮಕ್ಕೆ ಧನ್ಯವಾದಗಳು‘ ಎಂದು ಮಸ್ಕ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.