
ಪಿಟಿಐ
ನವದೆಹಲಿ: ಕೋಟಕ್ ಮಹೀಂದ್ರ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸ್ಥಾನಕ್ಕೆ ಉದಯ್ ಕೋಟಕ್ ಅವರು ರಾಜೀನಾಮೆ ನೀಡಿದ್ದಾರೆ. ಈ ಕುರಿತು ಬ್ಯಾಂಕ್ ಷೇರುಪೇಟೆಗೆ ಶನಿವಾರ ಮಾಹಿತಿ ನೀಡಿದೆ.
ಅವರ ರಾಜೀನಾಮೆಗೆ ಕಾರಣ ತಿಳಿಸಿಲ್ಲ. ಇಂದಿನಿಂದಲೇ ಅವರು ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ ಎಂದು ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.
ಉದಯ್ ಕೋಟಕ್ ಅವರು ಬ್ಯಾಂಕ್‌ನ ನಾನ್ ಎಕ್ಸಿಕ್ಯೂಟಿವ್ ನಿರ್ದೇಶಕರಾಗಿ ಮುಂದುವರಿಯುತ್ತಾರೆ ಎಂದು ಬ್ಯಾಂಕ್ ಹೇಳಿದೆ
ಸದ್ಯ ಬ್ಯಾಂಕ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ದೀಪಕ್ ಗುಪ್ತಾ ಅವರು ಡಿಸೆಂಬರ್ 31ರವರೆಗೆ ಸಿಇಒ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಆದರೆ, ಇದು ಆರ್‌ಬಿಐ ಒಪ್ಪಿಗೆಗೆ ಒಳಪಟ್ಟಿರಲಿದೆ ಎಂದು ಬ್ಯಾಂಕ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.