ADVERTISEMENT

ನಿರುದ್ಯೋಗ ತುಸು ಏರಿಕೆ

ಪಿಟಿಐ
Published 16 ಫೆಬ್ರುವರಿ 2026, 14:38 IST
Last Updated 16 ಫೆಬ್ರುವರಿ 2026, 14:38 IST
.
.   

ನವದೆಹಲಿ: ಜನವರಿ ತಿಂಗಳಿನಲ್ಲಿ ದೇಶದಲ್ಲಿ ನಿರುದ್ಯೋಗ ದರವು ಅಲ್ಪ ಏರಿಕೆ ಕಂಡಿದೆ ಎಂದು ಕೇಂದ್ರ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಸಚಿವಾಲಯದ ಮಾಸಿಕ ಸಮೀಕ್ಷೆ ಸೋಮವಾರ ತಿಳಿಸಿದೆ.

15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರ ನಿರುದ್ಯೋಗ ಪ್ರಮಾಣವು 2025ರ ಡಿಸೆಂಬರ್‌ನಲ್ಲಿ ಶೇ 4.8ರಷ್ಟಿತ್ತು. ಇದು ಪ್ರಸಕ್ತ ವರ್ಷದ ಜನವರಿಯಲ್ಲಿ ಶೇ 5ಕ್ಕೆ ಹೆಚ್ಚಳವಾಗಿದೆ.

ಜನವರಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ಪ್ರಮಾಣವು ಶೇ 3.9ರಿಂದ ಶೇ 4.2ಕ್ಕೆ ಏರಿಕೆಯಾಗಿದೆ. ನಗರ ಪ್ರದೇಶಗಳಲ್ಲಿ ಇದು ಶೇ 6.7ರಿಂದ ಶೇ 7ಕ್ಕೆ ಹೆಚ್ಚಳ ಕಂಡಿದೆ ಎಂದು ಸಚಿವಾಲಯ ಹೇಳಿದೆ. 

ADVERTISEMENT

ನಿರ್ಮಾಣ, ಕೃಷಿ ಸಂಬಂಧಿತ ಕೆಲಸಗಳು, ಸಾರಿಗೆ, ಸಣ್ಣ ವ್ಯಾಪಾರ ಸೇರಿದಂತೆ ಹಲವು ಚಟುವಟಿಕೆಗಳು ಚಳಿಗಾಲದಲ್ಲಿ ನಿಧಾನಗೊಂಡವು. ಇದು ನಿರುದ್ಯೋಗ ಪ್ರಮಾಣ ಹೆಚ್ಚಳಕ್ಕೆ ಕಾರಣ ಎಂದು ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.