ADVERTISEMENT

ಅನಿರ್ಬಂಧಿತ ಅಭಿವ್ಯಕ್ತಿ ಕಾನೂನಿಗೆ ಹೊಂದಿಕೆ ಆಗುವುದು: ಮಸ್ಕ್

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2022, 18:42 IST
Last Updated 27 ಏಪ್ರಿಲ್ 2022, 18:42 IST
ಇಲಾನ್ ಮಸ್ಕ್
ಇಲಾನ್ ಮಸ್ಕ್   

ಬೆಂಗಳೂರು: ತಮ್ಮನ್ನು ತಾವು ‘ಅನಿರ್ಬಂಧಿತ ಅಭಿವ್ಯಕ್ತಿಯ ಪ್ರತಿಪಾದಕ’ ಎಂದು ಕರೆದುಕೊಂಡಿರುವ ಉದ್ಯಮಿ ಇಲಾನ್ ಮಸ್ಕ್, ತಮ್ಮ ಪ್ರಕಾರ, ಅನಿರ್ಬಂಧಿತ ಅಭಿವ್ಯಕ್ತಿ ಎಂದರೆ ಕಾನೂನಿಗೆ ಹೊಂದಿಕೆಯಾಗುವಂತದ್ದು ಎಂದು ಟ್ವಿಟರ್‌ನಲ್ಲಿ ವಿವರಿಸಿದ್ದಾರೆ.

‘ಅನಿರ್ಬಂಧಿತ ಅಭಿವ್ಯಕ್ತಿ ಎಂದರೆ, ಕಾನೂನಿಗೆ ಹೊಂದಿಕೆಯಾಗುವುದು ಎಂದರ್ಥ. ಕಾನೂನನ್ನು ಮೀರಿ ಹೋಗುವ ಸೆನ್ಸಾರ್‌ಶಿಪ್‌ ಅನ್ನು ನಾನು ವಿರೋಧಿಸುತ್ತೇನೆ. ಸೀಮಿತ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಯಸುವ ಜನರು, ಆ ಸಂಬಂಧ ಕಾನೂನು ತರುವಂತೆ ಸರ್ಕಾರವನ್ನು ಕೇಳಿಕೊಳ್ಳುತ್ತಾರೆ. ಕಾನೂನನ್ನು ಮೀರಿ ನಡೆದುಕೊಳ್ಳುವುದು, ಜನರ ಇಚ್ಛೆಗೆ ವ್ಯತಿರಿಕ್ತವಾದುದು’ ಎಂದು ಅವರು ಹೇಳಿದ್ದಾರೆ.

ಪ್ರಮುಖ ಸಾಮಾಜಿಕ ಜಾಲತಾಣವಾದ ಟ್ವಿಟರ್‌ ಅನ್ನು 44 ಬಿಲಿಯನ್‌ ಡಾಲರ್‌ (₹3.37 ಲಕ್ಷ ಕೋಟಿ) ಮೊತ್ತಕ್ಕೆ ಖರೀದಿಸಲು ಇಲಾನ್ ಮಸ್ಕ್‌ ಅವರು ಒಪ್ಪಂದ ಮಾಡಿಕೊಂಡಿದ್ದಾರೆ. ಈ ಒಪ್ಪಂದದ ಬೆನ್ನಲೇ ಪರ–ವಿರೋಧದ ಚರ್ಚೆ ನಡೆಯುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.