ನವದೆಹಲಿ: ಟ್ರೇಡ್‌ಮಾರ್ಕ್ ಉಲ್ಲಂಘನೆಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್, ಅಮೆಜಾನ್ ಇಂಡಿಯಾಕ್ಕೆ ₹340 ಕೋಟಿ ದಂಡ ವಿಧಿಸಿದೆ.
ಅಮೆಜಾನ್ ಟೆಕ್ನಾಲಜೀಸ್‌ನ ವೆಬ್‌ಸೈಟ್‌ನಲ್ಲಿ ಕಾನೂನುಬಾಹಿರವಾಗಿ ಬೆವರ್ಲಿ ಹಿಲ್ಸ್ ಪೊಲೊ ಕ್ಲಬ್‌ನ ಬ್ರ್ಯಾಂಡ್ ಚಿಹ್ನೆ ಬಳಸಿಕೊಂಡು ಸಿದ್ಧಉಡುಪುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು 2020ರಲ್ಲಿ ಲೈಫ್‌ಸ್ಟೈಲ್ ಈಕ್ವಿಟೀಸ್ ಕಂಪನಿಯು ಪ್ರಕರಣ ದಾಖಲಿಸಿತ್ತು. ನಮ್ಮ ಬ್ರ್ಯಾಂಡ್ ಚಿಹ್ನೆಯಡಿಯೇ ಸಿದ್ಧಉಡುಪು ತಯಾರಿಸಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿತ್ತು.
ದೇಶದಲ್ಲಿ ಟ್ರೇಡ್‌ಮಾರ್ಕ್ ಉಲ್ಲಂಘನೆಗೆ ಸಂಬಂಧಿಸಿದಂತೆ ಅತಿಹೆಚ್ಚು ದಂಡ ವಿಧಿಸಿರುವ ಪ್ರಕರಣ ಇದಾಗಿದೆ ಎಂದು ಹೇಳಲಾಗಿದೆ.
ಅಮೆಜಾನ್ ಇಂಡಿಯಾವು ತನ್ನ ವೆಬ್‌ಸೈಟ್‌ನಲ್ಲಿ ಆಯ್ದ ಮಾರಾಟಗಾರರಿಗೆ ಅವಕಾಶ ಕಲ್ಪಿಸುವ ಮೂಲಕ ಸ್ಪರ್ಧಾತ್ಮಕತೆಯ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂದು ಆರೋಪವೂ ಕೇಳಿಬಂದಿದೆ. ಆದರೆ, ಇದನ್ನು ಕಂಪನಿಯು ನಿರಾಕರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.