ADVERTISEMENT

₹13 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಫೋನ್‌ಪೇ ಸಿದ್ಧತೆ?

ರಾಯಿಟರ್ಸ್
ಪಿಟಿಐ
Published 23 ಜೂನ್ 2025, 15:31 IST
Last Updated 23 ಜೂನ್ 2025, 15:31 IST
ಫೋನ್‌ಪೇ
ಫೋನ್‌ಪೇ   

ಬೆಂಗಳೂರು/ನವದೆಹಲಿ: ವಾಲ್‌ಮಾರ್ಟ್‌ ಮಾಲೀಕತ್ವದ ಭಾರತದ ಹಣಕಾಸು ತಂತ್ರಜ್ಞಾನ ಕಂಪನಿ ‘ಫೋನ್‌ಪೇ’ ಸಾರ್ವಜನಿಕ ಷೇರು ಹಂಚಿಕೆ (ಐಪಿಒ) ಮೂಲಕ ₹13 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಸಿದ್ಧತೆ ನಡೆಸಿದೆ ಎಂದು ಮೂಲಗಳು ಸೋಮವಾರ ತಿಳಿಸಿವೆ.

ಆಗಸ್ಟ್‌ ತಿಂಗಳಿನಲ್ಲಿ ಐಪಿಒ ಅರ್ಜಿಯನ್ನು ಸಲ್ಲಿಸಲು ಕಂಪನಿ ಯೋಜಿಸಿದೆ ಎಂದು ತಿಳಿಸಿವೆ. 

ಕೋಟಕ್‌ ಮಹೀಂದ್ರ ಕ್ಯಾಪಿಟಲ್‌, ಜೆಪಿಮಾರ್ಗನ್ ಚೇಸ್, ಸಿಟಿಗ್ರೂಪ್‌ ಮತ್ತು ಮಾರ್ಗನ್‌ ಸ್ಟ್ಯಾನ್ಲಿಯನ್ನು ಐಪಿಒ ಪ್ರಕ್ರಿಯೆಗಾಗಿ ನೇಮಕ ಮಾಡಿಕೊಂಡಿದೆ. ಐಪಿಒ ವಿವರ ಇದುವರೆಗೆ ಅಂತಿಮಗೊಂಡಿಲ್ಲ ಎಂದು ತಿಳಿಸಿವೆ.

ADVERTISEMENT

ಈ ಕುರಿತು ಫೋನ್‌ಪೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ವಾಲ್‌ಮಾರ್ಟ್‌ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ ಎಂದು ರಾಯಿಟರ್ಸ್‌ ತಿಳಿಸಿದೆ.

2016ರಲ್ಲಿ ಆರಂಭವಾದ ಪೋನ್‌ಪೇ ಇದುವರೆಗೆ ₹18 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಿದೆ.

61 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರು ಮತ್ತು 4 ಕೋಟಿಗೂ ಅಧಿಕ ವ್ಯಾಪಾರಿಗಳು ಫೋನ್‌ಪೇ ಬಳಸುತ್ತಿದ್ದಾರೆ. 2025ರ ಮೇ ತಿಂಗಳ ದತ್ತಾಂಶದ ಪ್ರಕಾರ ನಿತ್ಯ 34 ಕೋಟಿಗೂ ಹೆಚ್ಚು ವಹಿವಾಟು ನಡೆದಿದೆ. ಇದರ ಒಟ್ಟು ಪಾವತಿ ಮೌಲ್ಯ ₹150 ಲಕ್ಷ ಕೋಟಿಗೂ ಅಧಿಕ ಎಂದು ಪೋನ್‌ಪೇ ತಿಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.