ನವದೆಹಲಿ: ಕ್ಯೂಆರ್ ಕೋಡ್ ಆಧಾರಿತ ಯುಪಿಐ ಪಾವತಿ ವ್ಯವಸ್ಥೆಯನ್ನು ಕತಾರ್‌ನಾದ್ಯಂತ ಬಳಕೆಗೆ ಲಭ್ಯವಾಗಿಸಲಾಗಿದೆ ಎಂದು ಎನ್‌ಪಿಸಿಐ ಹೇಳಿದೆ.
ಭಾರತದಿಂದ ಕತಾರ್‌ಗೆ ತೆರಳುವವರು ಅಲ್ಲಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಇನ್ನು ಮುಂದೆ ಯುಪಿಐ ಬಳಸಿ ಹಣ ಪಾವತಿಸಬಹುದು ಎಂದು ಎನ್‌ಪಿಸಿಐ ಪ್ರಕಟಣೆ ತಿಳಿಸಿದೆ.
ಕತಾರ್‌ಗೆ ಭೇಟಿ ನೀಡುವ ವಿದೇಶಿಗರ ಪಟ್ಟಿಯಲ್ಲಿ ಭಾರತೀಯರು ಎರಡನೆಯ ಸ್ಥಾನದಲ್ಲಿದ್ದಾರೆ. ಯುಪಿಐ ಪಾವತಿ ಸೌಲಭ್ಯವು ಕತಾರ್‌ನಲ್ಲಿ ಲಭ್ಯವಾಗಿರುವ ಕಾರಣದಿಂದಾಗಿ ಅಲ್ಲಿ ವಹಿವಾಟು ನಡೆಸುವುದು ಸುಲಭವಾಗುತ್ತದೆ, ಭಾರತೀಯರು ಅಲ್ಲಿ ನಗದು ಇರಿಸಿಕೊಳ್ಳಬೇಕಾದ ಅಗತ್ಯ ಇನ್ನಿಲ್ಲವಾಗುತ್ತದೆ, ಕರೆನ್ಸಿ ವಿನಿಮಯದ ರಗಳೆ ತಪ್ಪುತ್ತದೆ ಎಂದು ಪ್ರಕಟಣೆ ಹೇಳಿದೆ.
ಈ ವ್ಯವಸ್ಥೆಯಿಂದಾಗಿ ಕತಾರ್‌ನಲ್ಲಿನ ಚಿಲ್ಲರೆ ವಹಿವಾಟುಗಳು ಹಾಗೂ ಪ್ರವಾಸೋದ್ಯಮಕ್ಕೆ ಕೂಡ ಅನುಕೂಲ ಆಗಲಿದೆ ಎಂದು ಅದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.