ADVERTISEMENT

ಸುಂಕ ಹೇರಿಕೆ: ಅಮೆರಿಕಕ್ಕೆ ರಫ್ತು ಇಳಿಕೆ

ಪಿಟಿಐ
Published 15 ಜನವರಿ 2026, 15:38 IST
Last Updated 15 ಜನವರಿ 2026, 15:38 IST
<div class="paragraphs"><p>ರಫ್ತು</p></div>

ರಫ್ತು

   

ನವದೆಹಲಿ: ಡಿಸೆಂಬರ್‌ ತಿಂಗಳಿನಲ್ಲಿ ಅಮೆರಿಕಕ್ಕೆ ದೇಶದ ಸರಕುಗಳ ರಫ್ತು ಶೇ 1.83ರಷ್ಟು ಇಳಿಕೆಯಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ತಿಳಿಸಿದೆ. 

ಭಾರತದ ಸರಕುಗಳ ಮೇಲೆ ಅಮೆರಿಕ ಹೇರಿದ ಹೆಚ್ಚಿನ ಸುಂಕವು ರಫ್ತು ಕಡಿಮೆ ಆಗಲು ಕಾರಣ ಎಂದು ತಿಳಿಸಿದೆ. ಡಿಸೆಂಬರ್‌ನಲ್ಲಿ ₹62,192 ಕೋಟಿ ಮೌಲ್ಯದ ಸರಕುಗಳು ರಫ್ತಾಗಿವೆ. ಆಮದು ಶೇ 7.57ರಷ್ಟು ಹೆಚ್ಚಾಗಿದ್ದು, ₹36,426 ಕೋಟಿಯಷ್ಟಾಗಿದೆ ಎಂದು ತಿಳಿಸಿದೆ. 

ADVERTISEMENT

ಚೀನಾಕ್ಕೆ ರಫ್ತು ಶೇ 67ರಷ್ಟು ಜಿಗಿತ:

ಡಿಸೆಂಬರ್‌ ತಿಂಗಳಿನಲ್ಲಿ ಚೀನಾಕ್ಕೆ ಭಾರತದಿಂದ, ₹18,437 ಕೋಟಿ ಮೌಲ್ಯದ ಸರಕುಗಳು ರಫ್ತಾಗಿದ್ದು, 2024ರ ಡಿಸೆಂಬರ್‌ಗೆ ಹೋಲಿಸಿದರೆ ರಫ್ತು ಪ್ರಮಾಣದಲ್ಲಿ ಶೇ 67.35ರಷ್ಟು ಹೆಚ್ಚಳವಾಗಿದೆ. 

ಎಲೆಕ್ಟ್ರಾನಿಕ್ಸ್‌, ಸಾಗರೋತ್ಪನ್ನಗಳು ಸೇರಿದಂತೆ ವಿವಿಧ ಸರಕುಗಳ ರಫ್ತಿನಲ್ಲಿ ಹೆಚ್ಚಳವಾಗಿದೆ. ಇದು ಒಟ್ಟಾರೆ ರಫ್ತು ಹೆಚ್ಚಳಕ್ಕೆ ಕಾರಣವಾಗಿದೆ. 

ಇದೇ ಅವಧಿಯಲ್ಲಿ ಚೀನಾದಿಂದ ಭಾರತವು, ₹1 ಲಕ್ಷ ಕೋಟಿ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿದ್ದು, ಶೇ 20ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದೆ. 

ಅಮೆರಿಕದ ನಂತರ ಚೀನಾವು ಭಾರತದ ಎರಡನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.