ADVERTISEMENT

ಅಮೆರಿಕದ ಡಿಎಫ್‌ಸಿಯಿಂದ ಭಾರತದಲ್ಲಿ ₹ 399 ಕೋಟಿ ಹೂಡಿಕೆ

ಭಾರತದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ನೆರವು

ಪಿಟಿಐ
Published 23 ಡಿಸೆಂಬರ್ 2020, 6:21 IST
Last Updated 23 ಡಿಸೆಂಬರ್ 2020, 6:21 IST
ಪ್ರಾತಿನಿಧಿಕ
ಪ್ರಾತಿನಿಧಿಕ   

ವಾಷಿಂಗ್ಟನ್‌: ಅಮೆರಿಕದ ಪ್ರಮುಖ ಹಣಕಾಸು ಸಂಸ್ಥೆ ಯುಎಸ್‌ ಇಂಟರ್‌ನ್ಯಾಷನಲ್‌ ಡೆವಲೆಪ್‌ಮೆಂಟ್‌ ಫೈನಾನ್ಸ್‌ ಕಾರ್ಪೋರೇಷನ್‌ (ಡಿಎಫ್‌ಸಿ) ಭಾರತದಲ್ಲಿ ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ₹ 399 ಕೋಟಿ (54 ದಶಲಕ್ಷ ಡಾಲರ್‌) ಹೂಡಿಕೆ ಮಾಡಲು ನಿರ್ಧರಿಸಿದೆ.

ಭಾರತವು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕ ಶಕ್ತಿಯಾಗಿದೆ. ಆದರೆ, ಈಗ ಕೋವಿಡ್‌–19ನಿಂದಾಗಿ ಮೂಲಸೌಕರ್ಯ ಅಭಿವೃದ್ಧಿಗೆ ಹಣಕಾಸಿನ ಕೊರತೆಯನ್ನು ಎದುರಿಸುತ್ತಿದೆ. ಈ ಕಾರಣಕ್ಕಾಗಿಯೇ ಭಾರತದಲ್ಲಿ ಹೂಡಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಡಿಎಫ್‌ಸಿ ಹೇಳಿದೆ.

‘ಆರ್ಥಿಕತೆಯ ಪ್ರಗತಿಗೆ ಪೂರಕವಾದ ಅಭಿವೃದ್ಧಿ ಕಾಮಗಾರಿಗಳಿಗೆ ಬಂಡವಾಳವನ್ನು ಆಕರ್ಷಿಸಲು ನ್ಯಾಷನಲ್‌ ಇನ್‌ವೆ್ಸ್ಟ್‌ಮೆಂಟ್‌ ಆ್ಯಂಡ್ ಇನ್‌ಫ್ರಾಸ್ಟ್ರಕ್ಷರ್‌ ಫಂಡ್‌ (ಎನ್‌ಐಐಎಫ್‌) ಅನ್ನು ಭಾರತ ಸ್ಥಾಪಿಸಿದೆ. ಎನ್‌ಐಐಎಫ್‌ನಲ್ಲಿ ಈ ಮೊತ್ತವನ್ನು ಹೂಡಿಕೆ ಮಾಡಲಾಗುವುದು‘ ಎಂದು ಡಿಎಫ್‌ಸಿ ಸಿಇಒ ಆ್ಯಡಮ್‌ ಬಾಲರ್‌ ಹೇಳಿದ್ದಾರೆ.

ADVERTISEMENT

‘ಡಿಎಫ್‌ಸಿ ಮಾಡುವ ಹೂಡಿಕೆಯಿಂದ ನಾವು ನಮ್ಮ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಅನುಕೂಲವಾಗಲಿದೆ. ಮೂಲಸೌಕರ್ಯ ಅಭಿವೃದ್ಧಿಗಾಗಿ ಎನ್‌ಐಐಎಫ್‌ನೊಂದಿಗೆ ಡಿಎಫ್‌ಸಿ ಪಾಲುದಾರಿಕೆಗೆ ಮುಂದಾಗಿರುವುದು ನಮ್ಮಲ್ಲಿ ಉತ್ಸಾಹ ಮೂಡಿಸಿದೆ’ ಎಂದು ಎನ್‌ಐಐಎಫ್‌ನ ಸಿಇಒ ಸುಜಯ್‌ ಬೋಸ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.