ADVERTISEMENT

ಅಮೆರಿಕದಿಂದ ಸುಂಕ ಪರಿಣಾಮ: ಜಿಡಿಪಿ ಶೇ 6ಕ್ಕಿಂತ ಇಳಿಕೆ ನಿರೀಕ್ಷೆ

ಪಿಟಿಐ
Published 28 ಆಗಸ್ಟ್ 2025, 15:27 IST
Last Updated 28 ಆಗಸ್ಟ್ 2025, 15:27 IST
ಜಿಡಿಪಿ
ಜಿಡಿಪಿ   

ನವದೆಹಲಿ: ಅಮೆರಿಕದ ಸುಂಕ ಹೇರಿಕೆಯಿಂದ ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಶೇ 6ಕ್ಕಿಂತ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಸಂಶೋಧನಾ ಏಜೆನ್ಸಿಗಳು ಮತ್ತು ವಿಶ್ಲೇಷಕರು ತಿಳಿಸಿದ್ದಾರೆ.

2025–26ರಲ್ಲಿ ದೇಶದ ಆರ್ಥಿಕ ಬೆಳವಣಿಗೆ ಶೇ 0.20ರಷ್ಟು ಕಡಿಮೆ ಆಗಿ, ಶೇ 5.8ಕ್ಕೆ ಇಳಿಯಲಿದೆ. 2026–27ರಲ್ಲಿ ಇದು ಶೇ 5.4 ಆಗುವ ನಿರೀಕ್ಷೆ ಇದೆ ಎಂದು ಬಿಎಂಐ ಸಂಸ್ಥೆ ತಿಳಿಸಿದೆ. ಜಪಾನ್‌ನ ಬ್ರೋಕರೇಜ್‌ ಸಂಸ್ಥೆ ನೊಮುರಾ, ದೇಶದ ಆರ್ಥಿಕ ಬೆಳವಣಿಗೆ ದರವನ್ನು ಶೇ 6.2ರಿಂದ ಶೇ 5.8ಕ್ಕೆ ತಗ್ಗಿಸಿದೆ. ಸುಂಕವನ್ನು ತೆಗೆದು ಹಾಕಿದರೆ, ಶೇ 6ರಷ್ಟು ಬೆಳೆಯಬಹುದು ಎಂದು ಅಂದಾಜಿಸಿದೆ.

ರಫ್ತು ಇಳಿಕೆಯು ಉದ್ಯೋಗ ಕಡಿತಕ್ಕೆ ಕಾರಣವಾಗುತ್ತದೆ ಮತ್ತು ಖಾಸಗಿ ಹೂಡಿಕೆ ಪ್ರಮಾಣದ ಮೇಲೆ ಪರಿಣಾಮ ಬೀರಲಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಎಚ್ಚರಿಸಿದ್ದಾರೆ. ಆದರೂ, ಪ್ರಸ್ತಾವಿತ ಜಿಎಸ್‌ಟಿ ಸುಧಾರಣೆಗಳು ದೇಶೀಯ ಬಳಕೆ ಮತ್ತು ಬೇಡಿಕೆಯನ್ನು ಹೆಚ್ಚಿಸುವ ಮೂಲಕ ಆರ್ಥಿಕತೆಗೆ ಉತ್ತೇಜನ ನೀಡಲಿದೆ ಎಂದು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.