ಬೆಂಗಳೂರು: ವರಮಹಾಲಕ್ಷ್ಮಿ ವ್ರತದ ಅಂಗವಾಗಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ವಿಶೇಷ ಕೊಡುಗೆ ಪ್ರಕಟಿಸಿದೆ.
ಹಬ್ಬದ ಅಂಗವಾಗಿ, ಗ್ರಾಹಕರಿಗೆ ಚಿನ್ನ, ಕತ್ತರಿಸದ ಮತ್ತು ಹರಳುಗಳ ಆಭರಣದ ಮೇಲಿನ ಮೇಕಿಂಗ್ ಶುಲ್ಕದಲ್ಲಿ ಶೇ 30ರಷ್ಟು ರಿಯಾಯಿತಿ ನೀಡಲಾಗುವುದು. ಅಲ್ಲದೆ, ಹೆಚ್ಚುವರಿಯಾಗಿ ಬ್ರ್ಯಾಂಡ್ ವಜ್ರಗಳ ಮಾರಾಟ ಮೌಲ್ಯದ ಮೇಲೆ ಶೇ 30ರಷ್ಟು ರಿಯಾಯಿತಿ ಇದೆ. ಈ ಕೊಡುಗೆಗಳು ಆಗಸ್ಟ್ 8ರವರೆಗೆ ಮಾತ್ರ ಇರಲಿದೆ. ಗ್ರಾಹಕರು ಹತ್ತಿರದ ಮಲಬಾರ್ ಮಳಿಗೆಗೆ ಭೇಟಿ ನೀಡಿ ಕೊಡುಗೆ ಪಡೆದುಕೊಳ್ಳಬೇಕು ಎಂದು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ತಿಳಿಸಿದೆ.
ಪ್ರತಿಯೊಂದು ಖರೀದಿಗೂ ಒಂದು ವರ್ಷದ ಉಚಿತ ವಿಮೆ, ಜೀವಿತಾವಧಿ ಉಚಿತ ನಿರ್ವಹಣೆ, ಹಳೆಯ ಚಿನ್ನ ಮತ್ತು ವಜ್ರಗಳಿಗೆ ಶೇ 100ರಷ್ಟು ವಿನಿಮಯ ಮೌಲ್ಯವನ್ನು ನೀಡಲಾಗುತ್ತದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.