ಬೆಂಗಳೂರು: ರಾಜ್ಯದ ಜಂತಕಲ್ ಕಬ್ಬಿಣದ ಅದಿರು ಗಣಿಗೆ ವೇದಾಂತ ಲಿಮಿಟೆಡ್ ಕಂಪನಿಯನ್ನು ‘ಆದ್ಯತೆಯ ಬಿಡ್ಡರ್’ ಎಂದು ಘೋಷಿಸಲಾಗಿದೆ. ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಈ ಗಣಿಗೆ ಇ–ಹರಾಜು ಪ್ರಕ್ರಿಯೆ ನಡೆಸಿತ್ತು.
ಜಂತಕಲ್ ಗಣಿಯು 71.16 ಹೆಕ್ಟೇರ್ ವಿಸ್ತೀರ್ಣ ಹೊಂದಿದೆ ಎಂದು ವೇದಾಂತ ಲಿಮಿಟೆಡ್‌ನ ಪ್ರಕಟಣೆ ತಿಳಿಸಿದೆ. ಈ ಗುತ್ತಿಗೆ ಕಾರ್ಯರೂಪಕ್ಕೆ ಬರಲು ಇನ್ನೂ ಕೆಲವು ಒಪ್ಪಿಗೆಗಳು ಸಿಗಬೇಕಿವೆ.
ಭಾರತದ ಕೈಗಾರಿಕಾ ಬೆಳವಣಿಗೆಗೆ ಬೆಂಬಲವಾಗಿ ನಿಲ್ಲಲು ಹಾಗೂ ಕಚ್ಚಾ ವಸ್ತುಗಳ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಲು ಅಗತ್ಯವಿರುವ ಪ್ರಮುಖ ಸಂಪನ್ಮೂಲಗಳನ್ನು ಪಡೆಯಲು ಕಂಪನಿಯು ಗಮನ ನೀಡುತ್ತಿರುವುದನ್ನು ಈ ಬೆಳವಣಿಗೆಯು ಒತ್ತಿಹೇಳಿದೆ ಎಂದು ಕಂಪನಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.