ಅನಿಲ್ ಹಾಗೂ ಅಗ್ನಿವೇಶ್ ಅಗರವಾಲ್
ವಾಷಿಂಗ್ಟನ್: ಅಮೆರಿಕದಲ್ಲಿ ನಡೆದ ಸ್ಕೀಯಿಂಗ್ ಅವಘಡದಲ್ಲಿ ಗಾಯಗೊಂಡಿದ್ದ ವೇದಾಂತ ಕಂಪನಿಯ ಸಂಸ್ಥಾಪಕ, ಉದ್ಯಮಿ ಅನಿಲ್ ಅಗರವಾಲ್ ಅವರ ಹಿರಿಯ ಮಗ ಅಗ್ನಿವೇಶ್ ಅಗರವಾಲ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಅವರಿಗೆ 49 ವರ್ಷವಾಗಿತ್ತು.
ಈ ಬಗ್ಗೆ ಅಗ್ನಿವೇಶ್ ಅವರು ‘ಎಕ್ಸ್’ನಲ್ಲಿ ದುಃಖ ಹಂಚಿಕೊಂಡಿದ್ದಾರೆ. ‘ಇದು ನನ್ನ ಜೀವನದ ಅತ್ಯಂತ ಕರಾಳ ದಿನ’ ಎಂದು ಹೇಳಿದ್ದಾರೆ.
ಸ್ಕೀಯಿಂಗ್ ಅವಘಡದಲ್ಲಿ ಗಾಯಗೊಂಡಿದ್ದ ಅಗ್ನಿವೇಶ್ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದರು. ಆದರೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
‘ಇಂದು ನನ್ನ ಜೀವನದ ಅತ್ಯಂತ ಕರಾಳ ದಿನ. ನನ್ನ ಪ್ರಿಯ ಮಗ ಅಗ್ನಿವೇಶ್ ನಮ್ಮನ್ನು ಬಿಟ್ಟು ದೂರ ತೆರಳಿದ. ಅವನಿಗೆ ಕೇವಲ 49 ವರ್ಷ. ಆರೋಗ್ಯವಂತನಾಗಿದ್ದ, ಲವಲವಿಕೆಯಿಂದ ಇದ್ದ, ಹಲವು ಕನಸುಗಳಿದ್ದವು. ಅಮೆರಿಕದಲ್ಲಿ ನಡೆದ ಸ್ಕೀಯಿಂಗ್ ಅಪಘಾತದಲ್ಲಿ ಗಾಯಗೊಂಡು ನ್ಯೂಯಾರ್ಕ್‌ನ ಮೌಂಟ್ ಸಿನಾಯಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದ. ಹಠಾತ್ ಸಂಭವಿಸಿದ ಹೃದಯಾಘಾತದಿಂದ ಮೃತಪಟ್ಟಿದ್ದಾನೆ’ ಎಂದು ಅವರು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.