ADVERTISEMENT

ಶೀಘ್ರವೇ ಬಾಕಿ ಪಾವತಿ: ವೊಡಾಫೋನ್

ಪಿಟಿಐ
Published 15 ಫೆಬ್ರುವರಿ 2020, 19:45 IST
Last Updated 15 ಫೆಬ್ರುವರಿ 2020, 19:45 IST
   

ನವದೆಹಲಿ: ಸುಪ್ರೀಂಕೋರ್ಟ್‌ ಆದೇಶದಂತೆ, ದೂರಸಂಪರ್ಕ ಇಲಾಖೆಗೆ ಹೊಂದಾಣಿಕೆ ಮಾಡಿದ ಒಟ್ಟು ವರಮಾನದ (ಎಜಿಆರ್‌) ಬಾಕಿ ಮೊತ್ತ ಪಾವತಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ವೊಡಾಫೋನ್‌ ಐಡಿಯಾ ಶನಿವಾರ ತಿಳಿಸಿದೆ.

ಕೆಂದ್ರ ಸರ್ಕಾರಕ್ಕೆ ₹ 1.47 ಲಕ್ಷ ಕೋಟಿ ಎಜಿಆರ್‌ ಬಾಕಿ ಪಾವತಿಸುವ ಸಂಬಂಧ ಸುಪ್ರೀಂಕೋರ್ಟ್‌ ಶುಕ್ರವಾರ ದೂರಸಂಪರ್ಕ ಸೇವಾ ಕಂಪನಿಗಳನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ವೊಡಾಫೋನ್‌ ಐಡಿಯಾ ಈ ಹೇಳಿಕೆ ನೀಡಿದೆ.

ಪಾವತಿಸಬೇಕಾಗಿರುವ ಮೊತ್ತವನ್ನು ಎಜಿಆರ್ ಆಧಾರದ ಮೇಲೆ ಲೆಕ್ಕಹಾಕಲಾಗುತ್ತಿದೆ. ಇದು ಪೂರ್ಣಗೊಂಡ ಕೆಲವೇ ದಿನಗಳಲ್ಲಿ ಪಾವತಿ ಮಾಡಲಾಗುವುದು ಎಂದು ಮುಂಬೈ ಷೇರುಪೇಟೆಗೆ ತಿಳಿಸಿದೆ.

ADVERTISEMENT

ಭಾರತದಲ್ಲಿ ವಹಿವಾಟು ಮುಂದುವರಿಸಬೇಕೇ ಅಥವಾ ಬೇಡವೇ ಎನ್ನುವುದು ಕೋರ್ಟ್‌ ನೀಡುವ ತೀರ್ಪಿನ ಮೇಲೆ ನಿರ್ಧಾರವಾಗಲಿದೆ ಎಂದಿದೆ. ಕೇಂದ್ರ ಸರ್ಕಾರ ನೆರವಿಗೆ ಬರದೇ ಇದ್ದರೆ ಭಾರತದಿಂದ ಹೊರಹೋಗುವ ಪರಿಸ್ಥಿತಿ ಎದುರಾಗಬಹುದು ಎಂದು ಕಂಪನಿ ಈ ಹಿಂದೆಯೇ ಹೇಳಿತ್ತು.

ಕಂಪನಿಯು ಒಟ್ಟಾರೆ ₹ 53,038 ಕೋಟಿ ಬಾಕಿ ನೀಡಬೇಕಿದೆ.

‘ಯಾವುದಾದರೂ ಒಂದು ದೂರಸಂಪರ್ಕ ಕಂಪನಿ ದಿವಾಳಿ ಎಂದು ಘೋಷಿಸಿಕೊಂಡರೆ ಅದರಿಂದ ಬ್ಯಾಂಕ್‌ಗಳು ಸಂಕಷ್ಟಕ್ಕೆ ಸಿಲುಕಲಿವೆ’ ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್‌ ಕುಮಾರ್‌ ಹೇಳಿದ್ದಾರೆ.

ಸಮಸ್ಯೆ ಬಗೆಹರಿಸುವ ಶಕ್ತಿ ಮತ್ತು ಆಯ್ಕೆಗಳು ಕೇಂದ್ರ ಸರ್ಕಾರದ ಬಳಿ ಇವೆ ಎಂದು ಮೊಬೈಲ್‌ ಸೇವಾ ಸಂಸ್ಥೆಗಳ ಸಂಘ (ಸಿಒಎಐ) ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.