ADVERTISEMENT

ಶುಲ್ಕ ಪರಿಷ್ಕರಣೆ ಅಗತ್ಯ: ವಿಐಎಲ್‌

ಪಿಟಿಐ
Published 7 ಆಗಸ್ಟ್ 2022, 15:30 IST
Last Updated 7 ಆಗಸ್ಟ್ 2022, 15:30 IST

ನವದೆಹಲಿ: ಮೊಬೈಲ್ ಸೇವಾ ಶುಲ್ಕಗಳನ್ನು ಕಾಲಕಾಲಕ್ಕೆ ಪರಿಷ್ಕರಿಸುವ ಅಗತ್ಯವಿದೆ ಎಂದು ವೊಡಾಫೋನ್ ಐಡಿಯಾ ಕಂಪನಿ ಹೇಳಿದೆ.

'ವಿಶ್ವದಲ್ಲಿ ಅತ್ಯಂತ ಕಡಿಮೆ ಶುಲ್ಕ ಇರುವುದು ಭಾರತದಲ್ಲಿ. ಆದರೆ, ಅನಿಯಮಿತ ಡೇಟಾ ಸೌಲಭ್ಯದ ಕಾರಣದಿಂದಾಗಿ ಅತಿಹೆಚ್ಚು ತಲಾವಾರು ಡೇಟಾ ಬಳಕೆ ಇರುವುದು ಕೂಡ ಭಾರತದಲ್ಲಿಯೇ’ ಎಂದು ಕಂಪನಿಯು ವಾರ್ಷಿಕ ವರದಿಯಲ್ಲಿ ಹೇಳಿದೆ.

‘ದೂರಸಂಪರ್ಕ ಉದ್ಯಮವು ಕಾಲಕಾಲಕ್ಕೆ ಸೇವಾ ಶುಲ್ಕವನ್ನು ಜಾಸ್ತಿ ಮಾಡಬೇಕು. ಕಂಪನಿಗಳು ಹೂಡಿಕೆ ಮಾಡಿರುವ ಮೊತ್ತಕ್ಕೆ ಪ್ರತಿಯಾಗಿ ಒಳ್ಳೆಯ ಫಲ ಸಿಗಬೇಕು ಎಂದಾದರೆ, ಭವಿಷ್ಯದಲ್ಲಿ ಹೂಡಿಕೆಗಳಿಗೆ ನೆರವಾಗಬೇಕು ಎಂದಾದರೆ ಇದು ಅಗತ್ಯ’ ಎಂದು ಕಂಪನಿಯು ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.