ADVERTISEMENT

ಬೆಂಗಳೂರಿನಲ್ಲಿ ವೊಡಾಫೋನ್‌ 5ಜಿ ಸೇವೆ ಆರಂಭ

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 16:13 IST
Last Updated 11 ಜೂನ್ 2025, 16:13 IST
ವೊಡಾಫೋನ್‌ ಐಡಿಯಾ
ವೊಡಾಫೋನ್‌ ಐಡಿಯಾ   

ಬೆಂಗಳೂರು: ದೂರಸಂಪರ್ಕ ಸೇವಾ ಕಂಪನಿ ವೊಡಾಫೋನ್‌ ಐಡಿಯಾ, 5 ಜಿ ಸೇವೆಗಳನ್ನು ಬೆಂಗಳೂರಿನಲ್ಲಿ ಬುಧವಾರ ಆರಂಭಿಸಿದೆ.

ಮುಂಬೈ, ದೆಹಲಿ, ಪಟ್ನಾ ಮತ್ತು ಚಂಡೀಗಢದಲ್ಲಿ ವೊಡಾಫೋನ್‌ ಐಡಿಯಾದ 5ಜಿ ಸೇವೆಗಳು ಈಗಾಗಲೇ ಶುರುವಾಗಿದೆ. ದೇಶದ ಪ್ರಮುಖ 17 ನಗರಗಳಲ್ಲಿ ಈ ಸೇವೆ ಆರಂಭಿಸುವ ಗುರಿಯನ್ನು ಕಂಪನಿ ಹೊಂದಿದೆ. ಆರಂಭಿಕ ಬೆಲೆಯಾಗಿ ಯೋಜನೆಗಳು ₹299ರಿಂದ ಆರಂಭಗೊಳ್ಳಲಿವೆ ಎಂದು ಕಂಪನಿ ತಿಳಿಸಿದೆ.

ಬಳಕೆದಾರರಿಗೆ ಉತ್ತಮ ನೆಟ್‌ವರ್ಕ್‌ ಸೇವೆ ಒದಗಿಸಲು ಸ್ಯಾಮ್ಸಂಗ್‌ ಜೊತೆ ಪಾಲುದಾರಿಕೆ ಮಾಡಿಕೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.