ಬೆಂಗಳೂರು: ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ಎಸ್‍ಎಂಇಗಳಿಗೆ ಮತ್ತು ಕೋವಿಡ್ ನಿಯಂತ್ರಣ ಕೌಶಲ ಸುಧಾರಣೆ ಮಾಡಿಕೊಳ್ಳಲು ಆರೋಗ್ಯ ಕಾರ್ಯಕರ್ತರಿಗೆ ನೆರವಿನ ಹಸ್ತ ನೀಡಲು ವಾಧ್ವಾನಿ ಫೌಂಡೇಷನ್ `ಸಹಾಯತಾ’ ಉಪಕ್ರಮ ಆರಂಭಿಸಿದೆ.
ಎಂಎಸ್‌ಎಂಇ ವಲಯವು ಉದ್ಯೋಗ ಸೃಷ್ಟಿಗೆ ಪೂರಕವಾಗಿ ಕೆಲಸ ಮಾಡುವಂತೆ ಸಜ್ಜುಗೊಳಿಸುವ ಗುರಿಯನ್ನು ಈ ಲಾಭ ರಹಿತವಾದ ಫೌಂಡೇಷನ್ ಹೊಂದಿದೆ. 10 ಸಾವಿರ ಎಸ್‌ಎಂಇಗಳಿಗೆ ಮತ್ತು ಆಶಾ ಕಾರ್ಯಕರ್ತರಿಗೆ ನೆರವು ನೀಡುವ ಉದ್ದೇಶಕ್ಕೆ ₹ 200 ಕೋಟಿ ವಿನಿಯೋಗಿಸಲಿದೆ. ಈ ಸಹಾಯತಾ ಉಪಕ್ರಮಗಳಿಗೆ ಮುಂದಿನ ತಿಂಗಳು ವೇಗ ನೀಡಲು ನಿರ್ಧರಿಸಲಾಗಿದೆ ಎಂದು ಫೌಂಡೇಷನ್ ಅಧ್ಯಕ್ಷ ಡಾ.ರೊಮೇಶ್ ವಾಧ್ವಾನಿ ತಿಳಿಸಿದ್ದಾರೆ. ವಿವರಗಳು https://sahayata.wfglobal.org ತಾಣದಲ್ಲಿ ಲಭ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.