ADVERTISEMENT

ಓಂಕಾರ್ 108 ಪ್ಲಸ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 17:26 IST
Last Updated 10 ಜೂನ್ 2020, 17:26 IST

ಹುಬ್ಬಳ್ಳಿ: ಸಂಕೇಶ್ವರ ಬೆವೆರೇಜಸ್‌ ವತಿಯಿಂದ ಕ್ಷಾರೀಯ (ಅಲ್ಕ್‌ಲೈನ್) ಶಕ್ತಿ ಹೊಂದಿರುವ ಶುದ್ಧ ಕುಡಿಯುವ ನೀರಿನ ‘ಓಂಕಾರ್‌ 108 ಪ್ಲಸ್‌’ ಎಂಬ ಹೊಸ ಬ್ರ್ಯಾಂಡ್‌‌ ಬಿಡುಗಡೆ ಮಾಡಲಾಗಿದೆ.

‘ರೋಗ ನಿರೋಧಕ ಶಕ್ತಿ ಹಾಗೂ ಜೀರ್ಣ ಕ್ರಿಯೆಯನ್ನು ಈ ನೀರು ಹೆಚ್ಚಿಸುತ್ತದೆ’ ಎಂದು ಬೆವೆರೇಜಸ್‌ನ ಮಾಲೀಕ ರವೀಂದ್ರ ಸಂಕೇಶ್ವರ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಈ ನೀರಿನ ಸರಬರಾಜಿಗಾಗಿ ‘ಓಂಕಾರ್‌ ಡೆಲಿವರಿ’ ಆ್ಯಪ್‌ ಅಭಿವೃದ್ಧಿ ಪಡಿಸಲಾಗಿದೆ. ಆ್ಯಪ್‌ ಮೂಲಕ ಬೇಡಿಕೆ ಸಲ್ಲಿಸಿದ ಹುಬ್ಬಳ್ಳಿಯ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಾಗುವುದು. ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧ ನಗರಗಳಲ್ಲಿಯೂ ಈ ಸೌಲಭ್ಯ ಕಲ್ಪಿಸಲಾಗುವುದು’ ಎಂದರು. ಉಪಾದ್ಯಕ್ಷ ಸಂತೋಷ ಭಾವಿಕಟ್ಟಿ, ವಿಲಾಸ ಸೋಗಿಕರ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.