ADVERTISEMENT

ಅಂದಾಜನ್ನು ಮೀರಲಿದೆ ಗೋಧಿ ಉತ್ಪಾದನೆ: ಕೃಷಿ ಆಯುಕ್ತ ಪಿ.ಕೆ. ಸಿಂಗ್‌

ಪಿಟಿಐ
Published 11 ಮೇ 2023, 15:36 IST
Last Updated 11 ಮೇ 2023, 15:36 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಗೋಧಿ ಉತ್ಪಾದನೆಯು 2022–23ರ ಬೆಳೆ ವರ್ಷದಲ್ಲಿ (ಜುಲೈ–ಜೂನ್‌) ಸರ್ಕಾರ ಮಾಡಿರುವ ಅಂದಾಜನ್ನು ಮೀರುವ ಸಾಧ್ಯತೆ ಇದೆ ಎಂದು ಕೃಷಿ ಆಯುಕ್ತ ಪಿ.ಕೆ. ಸಿಂಗ್‌ ಗುರುವಾರ ಹೇಳಿದ್ದಾರೆ.

2022–23ರ ಬೆಳೆ ವರ್ಷಕ್ಕೆ ದಾಖಲೆಯ 11.21 ಕೋಟಿ ಟನ್‌ ಗೋಧಿ ಉತ್ಪಾದನೆ ಆಗುವ ಅಂದಾಜನ್ನು ಸರ್ಕಾರ ಮಾಡಿದೆ. ಅತಿಯಾದ ತಾಪಮಾನವು ಕೆಲವು ಭಾಗಗಳಲ್ಲಿ ಗೋಧಿಯ ಗುಣಮಟ್ಟದ ಮೇಲೆ ಪರಿಣಾಮ ಬೀರಿರುವ ಆತಂಕದ ನಡುವೆಯೇ ಗೋಧಿ ಬೆಳೆಯುವ ಪ್ರಮುಖ ರಾಜ್ಯಗಳಲ್ಲಿ ಇಳುವರಿ ಹೆಚ್ಚಾಗಿರುವುದರಿಂದ ಅಂದಾಜು ಮೀರಿ ಉತ್ಪಾದನೆ ಆಗುವ ನಿರೀಕ್ಷೆ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.

2020–21ನೇ ಬೆಳೆ ವರ್ಷದಲ್ಲಿ 10.95 ಕೋಟಿ ಟನ್‌ ಗೋಧಿ ಉತ್ಪಾದನೆ ಆಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.