ADVERTISEMENT

ವಿಪ್ರೊ ತೆಕ್ಕೆಗೆ ಕೇರಳದ ‘ಬ್ರಾಹ್ಮಿನ್ಸ್‌’

ಪ್ಯಾಕ್‌ ಮಾಡಿದ ಆಹಾರ ಉತ್ಪ‍ನ್ನಗಳ ವಿಭಾಗದತ್ತ ಗಮನ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2023, 23:15 IST
Last Updated 20 ಏಪ್ರಿಲ್ 2023, 23:15 IST
   

ಬೆಂಗಳೂರು: ಕೇರಳ ಮೂಲದ ‘ಬ್ರಾಹ್ಮಿನ್ಸ್‌’ ಬ್ರ್ಯಾಂಡ್‌ ಅನ್ನು ಸ್ವಾಧೀನ ಪಡಿಸಿಕೊಳ್ಳಲು ನಿರ್ಣಾಯಕ ಒಪ್ಪಂದಕ್ಕೆ ಬರಲಾಗಿದೆ ಎಂದು ವಿಪ್ರೊ ಕನ್ಸ್ಯೂಮರ್‌ ಕೇರ್‌ ಆ್ಯಂಡ್‌ ಲೈಟ್ನಿಂಗ್‌ ಕಂಪನಿಯು ಗುರುವಾರ ತಿಳಿಸಿದೆ.

ಬ್ರಾಹ್ಮಿನ್ಸ್‌ ಬ್ರ್ಯಾಂಡ್‌, ಮಸಾಲೆ ಪದಾರ್ಥಗಳ ಮಿಶ್ರಣ ಮತ್ತು ಅಡುಗೆಗೆ ಸಿದ್ಧವಾದ (ರೆಡಿ ಟು ಕುಕ್) ಉತ್ಪನ್ನ
ಗಳಿಗೆ ಕೇರಳದಲ್ಲಿ ಹೆಚ್ಚು ಜನಪ್ರಿಯ
ವಾಗಿದೆ.

ವಿಪ್ರೊ ಕಂಪನಿಯು ಸಂಬಾರ ಪದಾರ್ಥಗಳು ಮತ್ತು ಅಡುಗೆಗೆ ಸಿದ್ಧವಾದ ಪದಾರ್ಥಗಳ ವಹಿವಾಟು ನಡೆಸುವ ನಿರಾಪರ ಕಂಪನಿಯನ್ನು ಈಚೆಗಷ್ಟೇ ಸ್ವಾಧೀನಪಡಿಸಿಕೊಂಡಿದೆ. ಈಗ ‘ಬ್ರಾಹ್ಮಿನ್ಸ್‌’ ಬ್ರ್ಯಾಂಡ್‌ ಖರೀದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಪ್ಯಾಕ್‌ ಮಾಡಿದ ಆಹಾರ ಉತ್ಪನ್ನಗಳ ವಿಭಾಗದಲ್ಲಿ ಹೆಚ್ಚಿನ ಪಾಲು ಹೊಂದಲು ಮುಂದಾಗಿದೆ.

ADVERTISEMENT

ಕೇರಳದಲ್ಲಿ ಬ್ರಾಹ್ಮಿನ್ಸ್‌ ಬ್ರ್ಯಾಂಡ್‌ ಉತ್ತಮ ವಹಿವಾಟು ನಡೆಸುತ್ತಿದೆ. ಗುಣಮಟ್ಟದ ಗರಿಷ್ಠ ಮಾನದಂಡಗಳನ್ನು ಅಳವಡಿಸಿಕೊಂಡಿರುವುದರಿಂದ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಈ ಬ್ರ್ಯಾಂಡ್ ಸ್ವಾಧೀನ ಮಾಡಿಕೊಳ್ಳುತ್ತಿರುವುದು ಸಂತೋಷ ತಂದಿದೆ ಎಂದು ಕಂಪನಿಯ ಸಿಇಒ ವಿನೀತ್‌ ಅಗರ್ವಾಲ್‌ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಬ್ರಾಹ್ಮಿನ್ಸ್‌’ 1987ರಲ್ಲಿ ಸ್ಥಾಪನೆ ಆಗಿದ್ದು, ಕೇರಳದ ಮಾರುಕಟ್ಟೆಯಲ್ಲಿ ಗ್ರಾಹಕರು ಹೆಚ್ಚು ಇಷ್ಟಪಡುವ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ ಎಂದು ವಿಪ್ರೊ ಹೇಳಿದೆ.

‘ಬ್ರಾಹ್ಮಿನ್ಸ್‌ ಬ್ರ್ಯಾಂಡ್‌ ಇದೀಗ ವಿಪ್ರೊ ಕನ್ಸ್ಯೂಮರ್‌ ಕೇರ್‌ ಭಾಗವಾಗಿರುವುದು ಹೆಮ್ಮೆಯ ವಿಷಯ. ಸ್ಥಳೀಯ ಗ್ರಾಹಕರ ಬೆಂಬಲದೊಂದಿಗೆ ಬ್ರ್ಯಾಂಡ್‌ ಅಭಿವೃದ್ಧಿಪಡಿಸಲು ಮತ್ತು ತಯಾರಿಕೆಯನ್ನು ಇನ್ನಷ್ಟು ಉತ್ತಮಗೊಳಿಸಲು ಜಂಟಿಯಾಗಿ ಗಮನ ಹರಿಸಲಾಗುವುದು. ವಿಪ್ರೊ ಕಂಪನಿಯ ನೆಟ್‌ವರ್ಕ್‌, ಮಾರುಕಟ್ಟೆ ಪರಿಣತಿಯಿಂದ ಬ್ರಾಹ್ಮಿನ್ಸ್‌ ಬ್ರ್ಯಾಂಡ್‌ ಹೊಸ ಎತ್ತರಕ್ಕೆ ಏರುವ ವಿಶ್ವಾಸವಿದೆ’ ಎಂದು ಬ್ರಾಹ್ಮಿನ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಶ್ರೀನಾಥ್‌ ವಿಷ್ಣು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.