ADVERTISEMENT

ಮಾಹಿತಿ ತಂತ್ರಜ್ಞಾನ ಸೇವಾ ಕಂಪನಿ ವಿಪ್ರೊ ಲಾಭ ಏರಿಕೆ

ಪಿಟಿಐ
Published 16 ಅಕ್ಟೋಬರ್ 2025, 16:14 IST
Last Updated 16 ಅಕ್ಟೋಬರ್ 2025, 16:14 IST
ವಿಪ್ರೊ
ವಿಪ್ರೊ   

ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಮಾಹಿತಿ ತಂತ್ರಜ್ಞಾನ ಸೇವಾ ಕಂಪನಿ ವಿಪ್ರೊ ₹3,246 ಕೋಟಿ ನಿವ್ವಳ ಲಾಭ ಗಳಿಸಿದೆ. 

ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಕಂಪನಿ ₹3,208 ಕೋಟಿ ಲಾಭ ಗಳಿಸಿತ್ತು. ವರಮಾನ ಶೇ 1.7ರಷ್ಟು ಹೆಚ್ಚಳವಾಗಿ, ₹22,697 ಕೋಟಿ ಗಳಿಸಿದೆ ಎಂದು ಕಂಪನಿ ಗುರುವಾರ ಷೇರುಪೇಟೆಗೆ ತಿಳಿಸಿದೆ. 

‘ಯುರೋಪ್‌, ಏಷ್ಯಾ ಪೆಸಿಫಿಕ್, ಪಶ್ಚಿಮ ಏಷ್ಯಾ ಮತ್ತು ಆಫ್ರಿಕಾದೊಂದಿಗಿನ ವಹಿವಾಟು ಸದೃಢವಾಗಿದ್ದು, ವರಮಾನ ಉತ್ತಮವಾಗಿದೆ. ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ₹83,500 ಕೋಟಿ ಮೌಲ್ಯದ ಬುಕಿಂಗ್‌ ಆಗಿವೆ ಎಂದು ಕಂಪನಿಯ ಸಿಇಒ ಮತ್ತು ವ್ಯವಸ್ಥಾಪ‍ಕ ನಿರ್ದೇಶಕ ಶ್ರೀನಿ ಪಲ್ಲಿಯಾ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.