ADVERTISEMENT

ವಿಪ್ರೊ: ₹ 2,456 ಕೋಟಿ ನಿವ್ವಳ ಲಾಭ

ಲಾಭ ಶೇ 2.17 ಕುಸಿತ, ₹ 1 ಮಧ್ಯಂತರ ಲಾಭಾಂಶ ಘೋಷಣೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2020, 20:00 IST
Last Updated 14 ಜನವರಿ 2020, 20:00 IST
ಅಬಿದಲಿ ನೀಮೂಚವಾಲಾ
ಅಬಿದಲಿ ನೀಮೂಚವಾಲಾ   

ಬೆಂಗಳೂರು: ದೇಶದ ಮೂರನೇ ಅತಿದೊಡ್ಡ ಐ.ಟಿ ರಫ್ತು ಸಂಸ್ಥೆಯಾಗಿರುವ ವಿಪ್ರೊ, ಡಿಸೆಂಬರ್‌ ತ್ರೈಮಾಸಿಕದಲ್ಲಿ ₹ 2,456 ಕೋಟಿ ನಿವ್ವಳ ಲಾಭ ಗಳಿಸಿದೆ.

ವರ್ಷದ ಹಿಂದಿನ ₹ 2,510 ಕೋಟಿ ನಿವ್ವಳ ಲಾಭಕ್ಕೆ ಹೋಲಿಸಿದರೆ ಈ ಬಾರಿ ಶೇ 2.17ರಷ್ಟು ಇಳಿಕೆ ಕಂಡಿದೆ. ವರಮಾನವು ಮಾತ್ರ ಹಿಂದಿನ ವರ್ಷದ ₹ 15,059 ಕೋಟಿಗೆ ಹೋಲಿಸಿದರೆ ಶೇ 2.7ರಷ್ಟು ಹೆಚ್ಚಳಗೊಂಡು ₹ 15,470 ಕೋಟಿಗೆ ತಲುಪಿದೆ.

‘ಕಂಪನಿಯ ಎಲ್ಲ ವಹಿವಾಟು ವಿಭಾಗಗಳಲ್ಲಿ ದೀರ್ಘ ಸಮಯದಿಂದ ಸುಸ್ಥಿರ ಬೆಳವಣಿಗೆ ದಾಖಲಿಸುತ್ತಿದ್ದೇವೆ. ನಮ್ಮ ಗ್ರಾಹಕರ ಜತೆ ನಿರಂತರವಾಗಿ ಉತ್ತಮ ಬಾಂಧವ್ಯ ಹೊಂದಿರುವುದರಿಂದ ಹಣಕಾಸು ಸಾಧನೆ ಉತ್ತಮವಾಗಿದೆ’ ಎಂದು ಕಂಪನಿಯ ಸಿಇಒ ಅಬಿದಲಿ ನೀಮೂಚವಾಲಾ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.