ನವದೆಹಲಿ: ತಮ್ಮ ಉತ್ಪನ್ನಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲು ಹಲವು ಸವಾಲುಗಳೊಂದಿಗೆಕೇಂದ್ರ ಸರ್ಕಾರದ ಜೊತೆ ಕೆಲಸ ಮಾಡಲಾಗುತ್ತಿದೆ ಎಂದು ಟೆಸ್ಲಾ ಕಂಪನಿಯ ಸಿಇಒ ಎಲಾನ್ ಮಸ್ಕ್ ಹೇಳಿದ್ದಾರೆ.
ಟೆಸ್ಲಾ ಕಾರುಗಳನ್ನು ಭಾರತದಲ್ಲಿ ಆರಂಭಿಸುವುದಕ್ಕೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಅವರು ಟ್ವೀಟ್ ಮೂಲಕ ಈ ಉತ್ತರ ನೀಡಿದ್ದಾರೆ. ವಿದ್ಯುತ್ ಚಾಲಿತ ಕಾರುಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಬೇಕು ಎಂದು ಮಸ್ಕ್ ಅವರು ಹಿಂದಿನ ವರ್ಷ ಆಗ್ರಹಿಸಿದ್ದರು.
‘ಮೊದಲು ಭಾರತದಲ್ಲಿ ತಯಾರಿಕೆ ಶುರು ಮಾಡಿ. ನಂತರದಲ್ಲಿ ಸುಂಕ ವಿನಾಯಿತಿ ಬಗ್ಗೆ ಪರಿಶೀಲಿಸಬಹುದು’ ಎಂದು ಕೇಂದ್ರ ಸರ್ಕಾರವು ಆಗ ಪ್ರತಿಕ್ರಿಯಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.