ADVERTISEMENT

ಯೆಸ್‌ ಬ್ಯಾಂಕ್‌ ನಿವ್ವಳ ಲಾಭ ಶೇ 77ರಷ್ಟು ಹೆಚ್ಚಳ

ಪಿಟಿಐ
Published 22 ಜನವರಿ 2022, 10:32 IST
Last Updated 22 ಜನವರಿ 2022, 10:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಖಾಸಗಿ ವಲಯದ ಯೆಸ್‌ ಬ್ಯಾಂಕ್‌ನ ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ₹ 266.43 ಕೋಟಿಗಳಷ್ಟಾಗಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹ 150.77 ಕೋಟಿ ನಿವ್ವಳ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಲಾಭವು ಶೇ 77ರಷ್ಟು ಹೆಚ್ಚಾಗಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.

ಬ್ಯಾಂಕ್‌ನ ಒಟ್ಟಾರೆ ವರಮಾನವು ₹ 2,560 ಕೋಟಿಗಳಿಂದ ₹ 1,764 ಕೋಟಿಗಳಿಗೆ ಶೇ 31ರಷ್ಟು ಇಳಿಕೆ ಕಂಡಿದೆ.

ADVERTISEMENT

ವಸೂಲಾಗದ ಸಾಲದ (ಎನ್‌ಪಿಎ) ಸರಾಸರಿ ಪ್ರಮಾಣವು ಶೇ 15.36 ರಿಂದ ಶೇ 14.65ಕ್ಕೆ ಇಳಿಕೆ ಆಗಿದೆ. ಆದರೆ, ನಿವ್ವಳ ಎನ್‌ಪಿಎ ಶೇ 4.04ರಿಂದ ಶೇ 5.29ಕ್ಕೆ ಏರಿಕೆ ಆಗಿದೆ.

ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ನಷ್ಟ ಭರಿಸಲು ತೆಗೆದಿರಿಸುವ ಮೊತ್ತದ ಪ್ರಮಾಣವು ಶೇ 79.3ಕ್ಕೆ ಇಳಿಕೆ ಆಗಿದೆ ಎಂದು ಬ್ಯಾಂಕ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.