ADVERTISEMENT

ಎಂಎಫ್: ಹೊರನಡೆದ ಯೆಸ್ ಬ್ಯಾಂಕ್

ಪಿಟಿಐ
Published 21 ಆಗಸ್ಟ್ 2020, 14:18 IST
Last Updated 21 ಆಗಸ್ಟ್ 2020, 14:18 IST
ಯೆಸ್ ಬ್ಯಾಂಕ್
ಯೆಸ್ ಬ್ಯಾಂಕ್    

ನವದೆಹಲಿ: ಮ್ಯೂಚುವಲ್‌ ಫಂಡ್‌ ವ್ಯವಹಾರದಿಂದ ಹಿಂದೆ ಸರಿಯುತ್ತಿರುವುದಾಗಿ ಯೆಸ್ ಬ್ಯಾಂಕ್ ಶುಕ್ರವಾರ ಪ್ರಕಟಿಸಿದೆ. ‘ಯೆಸ್ ಆಸ್ತಿ ನಿರ್ವಹಣಾ ಕಂಪನಿ’ಯಲ್ಲಿ ತಾನು ಹೊಂದಿರುವ ಷೇರುಗಳನ್ನು ಅದು ‘ಜಿಪಿಎಲ್‌ ಹಣಕಾಸು ಮತ್ತು ಹೂಡಿಕೆ’ ಕಂಪನಿಗೆ ಮಾರಾಟ ಮಾಡಲಿದೆ.

‘ಈ ವಹಿವಾಟು ಪೂರ್ಣಗೊಂಡ ನಂತರ ಯೆಸ್‌ ಆಸ್ತಿ ನಿರ್ವಹಣಾ ಕಂಪನಿಯು (ಯೆಸ್‌ಎಎಂಸಿ) ಯೆಸ್ ಬ್ಯಾಂಕ್‌ನಅಂಗಸಂಸ್ಥೆಯಾಗಿ ಉಳಿಯುವುದಿಲ್ಲ. ಮ್ಯೂಚುವಲ್‌ ಫಂಡ್‌ ವಹಿವಾಟುಗಳಿಂದ ಬ್ಯಾಂಕ್‌ ಹೊರನಡೆಯಲಿದೆ’ ಎಂದು ಯೆಸ್ ಬ್ಯಾಂಕ್ ತಿಳಿಸಿದೆ. ಯೆಸ್‌ಎಎಂಸಿ 2020ರ ಹಣಕಾಸು ವರ್ಷದಲ್ಲಿ ಒಟ್ಟು ₹ 33 ಲಕ್ಷ ಆದಾಯ ಗಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT