ADVERTISEMENT

ಬಂಡವಾಳ ಸಂಗ್ರಹ ಯೆಸ್‌ ಬ್ಯಾಂಕ್‌ ಮಂಡಳಿ ಒಪ್ಪಿಗೆ

ಪಿಟಿಐ
Published 28 ಮಾರ್ಚ್ 2020, 20:00 IST
Last Updated 28 ಮಾರ್ಚ್ 2020, 20:00 IST
ಯೆಸ್‌ ಬ್ಯಾಂಕ್‌
ಯೆಸ್‌ ಬ್ಯಾಂಕ್‌   

ನವದೆಹಲಿ: ಷೇರು ಮಾರಾಟ ಮಾಡುವ ಮೂಲಕ ₹ 5 ಸಾವಿರ ಕೋಟಿ ಬಂಡವಾಳ ಸಂಗ್ರಹಿಸಲು ಯೆಸ್‌ ಬ್ಯಾಂಕ್‌ನ ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ.

ಅರ್ಹ ಸಾಂಸ್ಥಿಕ ವಿತರಣೆ/ಸಾರ್ವಜನಿಕ ವಿತರಣೆ, ವಿದೇಶಿ ಕರೆನ್ಸಿಗೆ ಪರಿವರ್ತಿಸಬಹುದಾದ ಬಾಂಡ್‌ಗಳು ಅಥವಾ ಇನ್ಯಾವುದೇ ರೀತಿಯಲ್ಲಿ ಎರಡು ಅಥವಾ ಅದಕ್ಕಿಂತಲೂ ಹೆಚ್ಚಿನ ಕಂತುಗಳಲ್ಲಿ ಬಂಡವಾಳ ಸಂಗ್ರಹಿಸಬಹುದಾಗಿದೆ.

ಫೆಬ್ರುವರಿ 7ರಂದು ನಡೆದಿದ್ದ ಆಡಳಿತ ಮಂಡಳಿ ಸಭೆಯಲ್ಲಿ ₹ 10 ಸಾವಿರ ಕೋಟಿಗೂ ಅಧಿಕ ಮೊತ್ತದ ಬಂಡವಾಳ ಸಂಗ್ರಹಿಸಲು ಅನುಮತಿ ನೀಡಲಾಗಿತ್ತು. ಇದೀಗ ಗುರುವಾರ ನಡೆದ ಸಭೆಯಲ್ಲಿ ಹೆಚ್ಚುವರಿಯಾಗಿ ₹ 5 ಸಾವಿರ ಕೋಟಿ ಸಂಗ್ರಹಿಸಲು ಒಪ್ಪಿಗೆ ದೊರೆತಿದೆ. ಆದರೆ, ಒಟ್ಟಾರೆ ಮೊತ್ತ ₹ 15 ಸಾವಿರ ಕೋಟಿಯನ್ನು ಮೀರುವಂತಿಲ್ಲ.

ADVERTISEMENT

ಹೊಸ ಆಡಳಿತ ಮಂಡಳಿಯ ಸಿಇಒ ಆಗಿ ಪ್ರಶಾಂತ್‌ ಕುಮಾರ್‌ ಅವರು ಮೂರು ವರ್ಷಗಳ ಅವಧಿಗೆ ನೇಮಕವಾಗಿದ್ದಾರೆ. 2020ರ ಮಾರ್ಚ್‌ 26ರಿಂದ ಜಾರಿಗೆ ಬರುವಂತೆ ಬ್ಯಾಂಕ್‌ ಪುನರ್‌ರಚನೆ ಆಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ಐಸಿಐಸಿಐ ಬ್ಯಾಂಕ್‌, ಕೋಟಕ್‌ ಮಹೀಂದ್ರಾ ಬ್ಯಾಂಕ್‌,ಬಂಧನ್‌ ಬ್ಯಾಂಕ್‌, ಎಚ್‌ಡಿಎಫ್‌ಸಿ ಸೇರಿ ಹಲವು ಕಂಪನಿಗಳು ಹೂಡಿಕೆ ಮಾಡಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.