ADVERTISEMENT

ಜೊಮಾಟೊ ಕಂಪನಿ ತೊರೆದ ಸಹ ಸಂಸ್ಥಾಪಕ ಗೌರವ್ ಗುಪ್ತಾ

ಪಿಟಿಐ
Published 14 ಸೆಪ್ಟೆಂಬರ್ 2021, 11:07 IST
Last Updated 14 ಸೆಪ್ಟೆಂಬರ್ 2021, 11:07 IST
ಗೌರವ್ ಗುಪ್ತಾ, ಚಿತ್ರ ಕೃಪೆ–ಟ್ವಿಟರ್
ಗೌರವ್ ಗುಪ್ತಾ, ಚಿತ್ರ ಕೃಪೆ–ಟ್ವಿಟರ್   

ನವದೆಹಲಿ: ಜನಪ್ರಿಯ ಆಹಾರ ಪೂರೈಕೆ ಸಂಸ್ಥೆಯಾದ ‘ಜೊಮಾಟೊ‘ದ ಸಹ ಸಂಸ್ಥಾಪಕ ಹಾಗೂ ಜೊಮಾಟೊ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಗೌರವ್ ಗುಪ್ತಾ ಕಂಪನಿ ತೊರೆದಿದ್ದಾರೆ.

ಕಂಪನಿ ಸಿಬ್ಬಂದಿಗೆ ಮಂಗಳವಾರ ಕಳಿಸಿರುವ ಮೇಲ್‌ನಲ್ಲಿ ಈ ವಿಷಯವನ್ನು ಗೌರವ್ ಗುಪ್ತಾ ತಿಳಿಸಿದ್ದಾರೆ. ಅವರು ಜೊಮಾಟೊದ ಪೂರೈಕೆ ವಿಭಾಗದ ಮುಖ್ಯಸ್ಥರಾಗಿದ್ದರು.

‘ನಾನು ನನ್ನ ಜೀವನದಲ್ಲಿ ಹೊಸ ತಿರುವು ತೆಗೆದುಕೊಳ್ಳುತ್ತಿದ್ದೇನೆ ಮತ್ತು ಇಲ್ಲಿಂದ ಹೊಸ ಅಧ್ಯಾಯವನ್ನು ಆರಂಭಿಸುತ್ತಿದ್ದೇನೆ. ಜೊಮಾಟೊದಲ್ಲಿ ಕಳೆದ 6 ವರ್ಷಗಳು ಅದ್ಭುತವಾಗಿದ್ದವು. ಜೊಮ್ಯಾಟೊವನ್ನು ಮುಂದಕ್ಕೆ ಕೊಂಡೊಯ್ಯಲು ನಮ್ಮಲ್ಲಿ ಈಗ ಉತ್ತಮ ತಂಡವಿದೆ‘ ಎಂದು ಗುಪ್ತಾ ಹೇಳಿದ್ದಾರೆ.

ADVERTISEMENT

‘ನಾನು ಜೊಮಾಟೊವನ್ನು ಅತೀವವಾಗಿ ಪ್ರೀತಿಸುತ್ತಿದ್ದೇನೆ ಮತ್ತು ಯಾವಾಗಲೂ ಅದರೊಂದಿಗೆ ಇರುತ್ತೇನೆ. ಅದರೊಂದಿಗೆ ನನ್ನದು ಅದ್ಭುತ ಪ್ರಯಾಣವಾಗಿತ್ತು. ಭವಿಷ್ಯದಲ್ಲಿ ನಾವು ಏನನ್ನು ಸಾಧಿಸುತ್ತೇವೆ ಎನ್ನುವುದರ ಬಗ್ಗೆ ಇನ್ನಷ್ಟು ಹೆಮ್ಮೆ ಪಡುತ್ತೇನೆ‘ ಎಂದು ಗುಪ್ತಾ ಹೇಳಿದ್ದಾರೆ.

ಜೊಮಾಟೊಸಂಸ್ಥಾಪಕ ಹಾಗೂ ಸಿಇಓ ದೀಪಿಂದರ್ ಗೋಯಲ್ ಅವರಿಗೆ ವಿಶೇಷ ಧನ್ಯವಾದ ತಿಳಿಸಿರುವ ಗುಪ್ತಾ, ‘ನಿಮ್ಮ ಪ್ರಯಾಣದ ಭಾಗವಾಗಿಸಿದ್ದಕ್ಕಾಗಿ ಅನಂತ ಧನ್ಯವಾದಗಳು‘ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಗೋಯಲ್, ‘ನೀವಿಲ್ಲದ ಜೊಮಾಟೊಊಹಿಸಿಕೊಳ್ಳುವುದು ಕಷ್ಟ‘ ಎಂದಿದ್ದಾರೆ.

2019 ರಲ್ಲಿ ಗೌರವ್ ಗುಪ್ತಾ ಅವರನ್ನು ಅಧಿಕೃತವಾಗಿಜೊಮಾಟೊಸಹ ಸಂಸ್ಥಾಪಕ ಎಂದು ಘೋಷಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.