ರಿನ್ಶುಲ್ ಚಂದ್ರ
ರಿನ್ಶುಲ್ ಚಂದ್ರ ಅವರ ಲಿಂಕ್ಡ್‌ಇನ್ ಚಿತ್ರ
ನವದೆಹಲಿ: ಜೊಮ್ಯಾಟೊದ ಆಹಾರ ವಿತರಣಾ ವ್ಯವಹಾರದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರಿನ್ಶುಲ್ ಚಂದ್ರ ರಾಜೀನಾಮೆ ನೀಡಿದ್ದಾರೆ ಎಂದು ಕಂಪನಿ ಷೇರು ಪೇಟೆಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದೆ.
ಹೊಸ ಅವಕಾಶಗಳಿಗೆ ಹಾಗೂ ತಮ್ಮ ಉತ್ಸಾಹಗಳನ್ನು ಮುಂದುವರಿಸಲು ಏಪ್ರಿಲ್ 5 ರಿಂದ ಜಾರಿಗೆ ಬರುವಂತೆ ರಿನ್ಶುಲ್ ರಾಜೀನಾಮೆ ನೀಡಿದ್ದಾರೆ ಎಂದು ಝೊಮ್ಯಾಟೊ ಶನಿವಾರ ಪೇಟೆಗೆ ನೀಡಿದ ಮಾಹಿತಿಯಲ್ಲಿ ಹೇಳಿದೆ.
ಜೊಮ್ಯಾಟೊ ಸಂಸ್ಥಾಪಕ ಮತ್ತು ಸಿಇಒ ದೀಪಿಂದರ್ ಗೋಯಲ್ ಅವರಿಗೆ ರಿನ್ಶುಲ್ ರಾಜೀನಾಮೆ ಪತ್ರ ಬರೆದಿದ್ದಾರೆ.
‘ 2025 ಏಪ್ರಿಲ್ 7 ರಿಂದ ಜಾರಿಗೆ ಬರುವಂತೆ ಎಟರ್ನಲ್ ಲಿಮಿಟೆಡ್‌ನ ಫುಡ್ ಆರ್ಡರಿಂಗ್ ಮತ್ತು ಡೆಲಿವರಿ ವ್ಯವಹಾರದ ಸಿಒಒ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಅವರು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.