ADVERTISEMENT

ಜೊಮಾಟೊ ಇನ್ಮುಂದೆ ಎಟರ್ನಲ್! ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಹಸಿರು ನಿಶಾನೆ

ಆನ್‌ಲೈನ್ ಆಹಾರ ಪೂರೈಕೆ ವೇದಿಕೆ ಜೊಮಾಟೊ ಕಂಪನಿಯ ಹೆಸರು ಬದಲಾವಣೆಗೆ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಹಸಿರು ನಿಶಾನೆ ತೋರಿದೆ.

ಪಿಟಿಐ
Published 21 ಮಾರ್ಚ್ 2025, 3:20 IST
Last Updated 21 ಮಾರ್ಚ್ 2025, 3:20 IST
<div class="paragraphs"><p>Zomato</p></div>

Zomato

   

ನವದೆಹಲಿ: ಆನ್‌ಲೈನ್ ಆಹಾರ ಪೂರೈಕೆ ವೇದಿಕೆ ಜೊಮಾಟೊ ಕಂಪನಿಯ ಹೆಸರು ಬದಲಾವಣೆಗೆ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಹಸಿರು ನಿಶಾನೆ ತೋರಿದೆ.

ಮಾರ್ಚ್ 20ರಿಂದಲೇ ಜೊಮಾಟೊ ಹೆಸರು ಬದಲಾವಣೆ ಜಾರಿಗೆ ಬಂದಿದೆ ಎಂದು ಕಂಪನಿ ತಿಳಿಸಿದೆ. ಇನ್ಮುಂದೆ ಜೊಮಾಟೊ ಕಂಪನಿಯ ಕಾರ್ಪೊರೇಟ್ ಹೆಸರು ‘ಎಟರ್ನಲ್’ ಎಂದು ಕರೆಯಲಾಗುತ್ತದೆ.

ADVERTISEMENT

ಆದರೆ, ಜೊಮಾಟೊ ಆ್ಯಪ್ ಹೆಸರು ಹಾಗೂ ಬ್ರ್ಯಾಂಡ್ ನೇಮ್ ಜೊಮಾಟೊ ಎಂದೇ ಮುಂದುವರೆಯಲಿದೆ ಎಂದು ಕಂಪನಿ ಹೇಳಿದೆ. ಸಂಸ್ಥೆಯ ಹೆಸರನ್ನು ‘ಎಟರ್ನಲ್’ ಎಂದು ಬದಲಾಯಿಸುವ ವಿಶೇಷ ನಿರ್ಣಯಕ್ಕೆ ಕಂಪನಿಯ ಷೇರುದಾರರು ಕಳೆದ ತಿಂಗಳು ಒಪ್ಪಿಗೆ ಸೂಚಿಸಿದ್ದರು.

ಸದ್ಯ ಎಟರ್ನಲ್ ಕಂಪನಿಯಡಿ ಜೊಮ್ಯಾಟೊ, ಬ್ಲಿಂಕಿಟ್, ಡಿಸ್ಟ್ರಿಕ್ಟ್ ಹಾಗೂ ಹೈಪರ್‌ಕ್ಯೂರ್ ಎನ್ನುವ ಉದ್ಯಮಗಳಿವೆ. ಕಾರ್ಪೊರೇಟ್ ವೆಬ್‌ಸೈಟ್‌ zomato.comನಿಂದ eternal.comಗೆ ಬದಲಾಗಲಿದೆ.

ಸಂಸ್ಥೆಯ ಹೆಸರನ್ನು ಬದಲಾಯಿಸಲು, ಕಂಪನಿಯ ಸಂಘದ ಜ್ಞಾಪಕ ಪತ್ರ ಮತ್ತು ಸಂಘದ ವಿಧಿಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಲು ಷೇರುದಾರರು ವಿಶೇಷ ನಿರ್ಣಯ ಮಾಡಿದ್ದರು.

ಕಂಪನಿಯ ಹೆಸರನ್ನು ಬದಲಿಸುವ ಬಗ್ಗೆ ಬೋರ್ಡ್‌ನಲ್ಲಿ ತೆಗೆದುಕೊಂಡಿರುವ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಬೇಕು ಎಂದು ಮನವಿ ಮಾಡಿ, ಜೊಮ್ಯಾಟೊ ಸಂಸ್ಥಾಪಕ ಹಾಗೂ ಸಿಇಒ ದೀಪಿಂದರ್ ಸಿಂಗ್ ಷೇರುದಾರರಿಗೆ ಮನವಿ ಮಾಡಿದ್ದರು.

ಬ್ಲಿಂಕಿಟ್ ನಮ್ಮ ಭವಿಷ್ಯದ ಚಾಲಕ ಶಕ್ತಿಯಾಗಿದ್ದು, ಅದನ್ನು ಸ್ವಾಧೀನಪಡಿಕೊಂಡ ಬಳಿಕ, ಬ್ರ್ಯಾಂಡ್ ಹಾಗೂ ಕ‍ಂಪನಿ ನಡುವೆ ವ್ಯತ್ಯಾಸ ಗುರುತಿಸಲು ಆಂತರಿಕವಾಗಿ ನಾವು ಜೊಮ್ಯಾಟೊ ಬದಲು ಎಟರ್ನಲ್ ಎಂದು ಬಳಕೆ ಮಾಡಲು ಪ್ರಾರಂಭಿಸಿದೆವು. ಈಗ ಸಾರ್ವಜನಿಕವಾಗಿ ಕಂಪನಿಯ ಹೆಸರನ್ನು ಬದಲಾಯಿಸಲು ನಿರ್ಧರಿಸಿದ್ದೇವೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.