ADVERTISEMENT

ಜೊಮ್ಯಾಟೊದ ಸಹ ಸಂಸ್ಥಾಪಕ ಗುಂಜನ್‌ ಪಾಟಿದಾರ್‌ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2023, 15:42 IST
Last Updated 2 ಜನವರಿ 2023, 15:42 IST
ಗುಂಜನ್‌ ಪಾಟಿದಾರ್‌
ಗುಂಜನ್‌ ಪಾಟಿದಾರ್‌   

ನವದೆಹಲಿ: ಆ್ಯಪ್ ಆಧಾರಿತ ಆಹಾರ ಪೂರೈಕೆ ಕಂಪನಿ ಜೊಮ್ಯಾಟೊದ ಸಹ ಸಂಸ್ಥಾಪಕ ಗುಂಜನ್‌ ಪಾಟಿದಾರ್‌ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಕಂಪನಿಯಲ್ಲಿ ಟೆಕ್ನಿಕಲ್‌ ಮುಖ್ಯಸ್ಥರಾಗಿ ಅವರು ಕೆಲಸ ಮಾಡುತ್ತಿದ್ದರು. ಜೊಮ್ಯಾಟೊ ಕಂಪನಿಗೆ ಯಾಕೆ ರಾಜೀನಾಮೆ ನೀಡಿದ್ದಾರೆ ಎಂಬುದು ಬಹಿರಂಗವಾಗಿಲ್ಲ.

2008ರಿಂದ ಅವರು ಜೊಮ್ಯಾಟೊ ಕಂಪನಿಯಲ್ಲಿ ಕೆಲಸ ಮಾಡಿದ್ದರು.

ADVERTISEMENT

ಕಳೆದ ನವೆಂಬರ್‌ ತಿಂಗಳಲ್ಲಿ ಸಹ ಸಂಸ್ಥಾಪಕ ಮೋಹಿತ್ ಗುಪ್ತಾ ರಾಜೀನಾಮೆ ನೀಡಿದ್ದರು. 2022ರ ಆಗಸ್ಟ್ ತಿಂಗಳಲ್ಲಿ ಜೊಮ್ಯಾಟೊದ ಉಪ ಮುಖ್ಯ ಹಣಕಾಸು ಅಧಿಕಾರಿ ನಿತಿನ್ ಸವಾರಾ ಕೂಡ ರಾಜೀನಾಮೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.