ADVERTISEMENT

ಖಜಾನೆ ವ್ಯವಸ್ಥೆಗೆ ಕರ್ಣಾಟಕ ಬ್ಯಾಂಕ್ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2022, 21:36 IST
Last Updated 6 ಸೆಪ್ಟೆಂಬರ್ 2022, 21:36 IST

‌ಮಂಗಳೂರು: ರಾಜ್ಯ ಸರ್ಕಾರದ ಖಜಾನೆ ಇಲಾಖೆ ವ್ಯವಸ್ಥೆಗೆ ಕರ್ಣಾಟಕ ಬ್ಯಾಂಕ್ ಸೇರ್ಪಡೆಯಾಗಿದ್ದು, ಬ್ಯಾಂಕ್‌ ಇನ್ನು ಮುಂದೆ ಎಲ್ಲ ವಿತ್ತೀಯ ವಹಿವಾಟು ಗಳನ್ನು ನಿರ್ವಹಿಸಬಹುದಾಗಿದೆ. ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಗಳಿಗೆ ಏಕ ನೋಡಲ್ ಏಜೆನ್ಸಿ ಖಾತೆಯಾಗಿ ಬ್ಯಾಂಕ್‌ ಕಾರ್ಯ ನಿರ್ವಹಿಸಬಹುದು.

‘ಕರ್ಣಾಟಕ ಬ್ಯಾಂಕ್ ಸರ್ಕಾರಿ ಇಲಾಖೆಗಳ ಹಣಕಾಸು ವ್ಯವಹಾರ ಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಈಗ, ಖಜಾನೆ-II (ಏ2) ಜೊತೆ ಸಂಯೋಜಿತಗೊಂಡು, ವಿವಿಧ ಯೋಜನೆಗಳ ಫಲಾನುಭವಿಗಳ ಖಾತೆಗೆ ನೇರ ನಗದು ಪ್ರಯೋಜನಗಳನ್ನು ವಿತರಿಸಲಿದೆ. ತಂತ್ರಜ್ಞಾನ ಮತ್ತು ಡಿಜಿಟಲ್ ವ್ಯವಹಾರಗಳ ಮೂಲಕ ಬ್ಯಾಂಕ್ ಸಾರ್ವಜನಿಕ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರದೊಂದಿಗೆ ಸಹಭಾಗಿಯಾಗಲು ಈ ಪಾಲುದಾರಿಕೆಯು ಸಹಕಾರಿ’ ಎಂದು ಬ್ಯಾಂಕ್‌ನ ಸಿಇಒ ಮಹಾಬಲೇಶ್ವರ ಎಂ.ಎಸ್. ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT