ADVERTISEMENT

ಎನ್‌ಎಂಡಿಸಿ ಲಾಭ ₹ 3,191 ಕೋಟಿ

ಪಿಟಿಐ
Published 12 ಆಗಸ್ಟ್ 2021, 17:43 IST
Last Updated 12 ಆಗಸ್ಟ್ 2021, 17:43 IST

ನವದೆಹಲಿ: ಸರ್ಕಾರಿ ಸ್ವಾಮ್ಯದ ಎನ್‌ಎಂಡಿಸಿಯ ನಿವ್ವಳ ಲಾಭವು ಜೂನ್‌ ತ್ರೈಮಾಸಿಕದಲ್ಲಿ ಆರು ಪಟ್ಟು ಹೆಚ್ಚಾಗಿದ್ದು, ₹ 3,191 ಕೋಟಿಗೆ ತಲುಪಿದೆ. ವರಮಾನದಲ್ಲಿ ಹೆಚ್ಚಳ ಆಗಿರುವುದೇ ಇದಕ್ಕೆ ಕಾರಣ ಎಂದು ಹೇಳಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಕಂಪನಿಯ ನಿವ್ವಳ ಲಾಭ ₹ 531 ಕೋಟಿ ಇತ್ತು.

ಒಟ್ಟಾರೆ ವರಮಾನವು ₹ 2,009 ಕೋಟಿಗಳಿಂದ ₹ 6,656 ಕೋಟಿಗಳಿಗೆ ಏರಿಕೆ ಕಂಡಿದೆ ಎಂದು ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.