ADVERTISEMENT

ಆದಿತ್ಯ ಬಿರ್ಲಾ, ಅದಾನಿ ಷೇರು ಏರಿಕೆ

ಪಿಟಿಐ
Published 2 ಏಪ್ರಿಲ್ 2024, 15:52 IST
Last Updated 2 ಏಪ್ರಿಲ್ 2024, 15:52 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಆದಿತ್ಯ ಬಿರ್ಲಾ ಫ್ಯಾಷನ್‌ ಆ್ಯಂಡ್‌ ರಿಟೇಲ್‌ ಲಿಮಿಟೆಡ್‌ ಷೇರಿನ ಮೌಲ್ಯವು ಮಂಗಳವಾರ ಶೇ 12ರಷ್ಟು ಏರಿಕೆಯಾಗಿದೆ. 

ಮೌಲ್ಯ ಹೆಚ್ಚಿಸುವ ದೃಷ್ಟಿಯಿಂದ ಚಿಲ್ಲರೆ ವ್ಯಾಪಾರದಲ್ಲಿ ಮುಂಚೂಣಿಯಲ್ಲಿರುವ ಮಧುರಾ ಫ್ಯಾಷನ್‌ ಆ್ಯಂಡ್‌ ಲೈಫ್‌ಸ್ಟೈಲ್‌ ಅನ್ನು ವಿಭಜಿಸಲಾಗುವುದು ಎಂದು ಕಂಪನಿಯು ಘೋಷಿಸಿದ ಬೆನ್ನಲ್ಲೇ ಷೇರಿನ ಮೌಲ್ಯ ಹೆಚ್ಚಳವಾಗಿದೆ.

ಬಿಎಸ್‌ಇಯಲ್ಲಿ ಷೇರಿನ ಮೌಲ್ಯವು ಶೇ 11.55ರಷ್ಟು ಮತ್ತು ಎನ್‌ಎಸ್‌ಇಯಲ್ಲಿ ಶೇ 11.97ರಷ್ಟು ಏರಿಕೆಯಾಗಿದೆ. ಪ್ರತಿ ಷೇರಿನ ಬೆಲೆ ಕ್ರಮವಾಗಿ ₹236.15 ಮತ್ತು ₹237ಕ್ಕೆ ಮುಟ್ಟಿತು. 

ADVERTISEMENT

ಅದಾನಿ ಷೇರು ಏರಿಕೆ:

ಅದಾನಿ ಸಮೂಹದ 10 ಕಂಪನಿಗಳ ಪೈಕಿ ಅದಾನಿ ಎನರ್ಜಿ ಸಲ್ಯೂಷನ್ಸ್‌ ಹೊರತುಪಡಿಸಿ ಉಳಿದ ಕಂಪನಿಗಳ ಷೇರಿನ ಮೌಲ್ಯ ಏರಿಕೆಯಾಗಿದೆ.

ಅದಾನಿ ಪವರ್‌ ಶೇ 5, ಅದಾನಿ ವಿಲ್ಮರ್‌ ಶೇ 4.15, ಎಸಿಸಿ ಶೇ 4.09, ಎನ್‌ಡಿಟಿವಿ ಶೇ 2.81, ಅಂಬುಜಾ ಸಿಮೆಂಟ್ಸ್‌ ಶೇ 2.09, ಅದಾನಿ ಪೋರ್ಟ್ಸ್‌ ಶೇ 2.02, ಅದಾನಿ ಟೋಟಲ್‌ ಗ್ಯಾಸ್‌ ಶೇ 0.65, ಅದಾನಿ ಎಂಟರ್‌ ಪ್ರೈಸಸ್‌ ಶೇ 0.51 ಮತ್ತು ಅದಾನಿ ಗ್ರೀನ್‌ ಎನರ್ಜಿ ಶೇ 0.30 ಹೆಚ್ಚಳವಾಗಿವೆ. ಅದಾನಿ ಎನರ್ಜಿ ಸಲ್ಯೂಷನ್ಸ್‌ ಶೇ 1.25ರಷ್ಟು ಇಳಿಕೆ ಕಂಡಿದೆ.

ಷೇರು ಸೂಚ್ಯಂಕಗಳು ಇಳಿಕೆ:

ಐ.ಟಿ, ಖಾಸಗಿ ಬ್ಯಾಂಕ್‌ ಮತ್ತು ಆಟೊ ಷೇರುಗಳ ಮಾರಾಟದ ಒತ್ತಡ ಮತ್ತು ವಿದೇಶಿ ಬಂಡವಾಳ ಹೊರಹರಿವಿನಿಂದಾಗಿ ಷೇರು ಸೂಚ್ಯಂಕಗಳು ಇಳಿಕೆ ಕಂಡಿವೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 110 ಅಂಶ ಇಳಿಕೆಯಾಗಿ, 73,903ಕ್ಕೆ ಸ್ಥಿರಗೊಂಡಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 8 ಅಂಶ ಕಡಿಮೆ ಆಗಿ 22,453ಕ್ಕೆ ಕೊನೆಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.