
ಷೇರು ಮಾರುಕಟ್ಟೆ
(ರಾಯಿಟರ್ಸ್ ಚಿತ್ರ)
ಅಸ್ಟ್ರಾ ಮೈಕ್ರೊವೇವ್ ಪ್ರಾಡಕ್ಟ್ಸ್ ಲಿಮಿಟೆಡ್‌ನ (ಎಎಂಪಿಎಲ್) ಷೇರಿನ ಬೆಲೆ ₹1,100 ಆಗಲಿದೆ ಎಂದು ಮೋತಿಲಾಲ್ ಫೈನಾನ್ಶಿಯಲ್ ಸರ್ವಿಸಸ್ ಹೇಳಿದೆ. ಅಸ್ಟ್ರಾ ಮೈಕ್ರೊವೇವ್ ಪ್ರಾಡಕ್ಟ್ಸ್ ಲಿಮಿಟೆಡ್, ರೇಡಿಯೊ ಫ್ರೀಕ್ವೆನ್ಸಿ ಮತ್ತು ಮೈಕ್ರೊವೇವ್ ಸಿಸ್ಟಮ್ಸ್‌ಗಳನ್ನು ಭಾರತದಲ್ಲಿ ವಿನ್ಯಾಸಗೊಳಿಸಿ ಮತ್ತು ತಯಾರಿಸುತ್ತದೆ.
ಎಎಂಪಿಎಲ್, ಪ್ರಸಕ್ತ ವರ್ಷದ ಸೆಪ್ಟೆಂಬರ್ ವೇಳೆಗೆ ₹2,200 ಕೋಟಿ ಮೌಲ್ಯದ ಕಾರ್ಯಾದೇಶ ಪಡೆದುಕೊಂಡು, ವಿತರಣೆ ಮಾಡಿದೆ. 2020–21ರಿಂದ 2024–25ರವರೆಗೆ ಕಂಪನಿಯ ವರಮಾನದ ಸಂಯುಕ್ತ ವಾರ್ಷಿಕ ಬೆಳವಣಿಗೆ ದರ (ಸಿಎಜಿಆರ್) ಶೇ 13ರಷ್ಟಿದೆ. ಕಂಪನಿಯ ತೆರಿಗೆ, ಬಡ್ಡಿ, ಸಾಲ ತೀರುವಳಿ (ಇಬಿಐಟಿಡಿಎ) ನಂತರದ ಲಾಭವು ಶೇ 25.6ರಷ್ಟಾಗಿದೆ.
2024–25ರಿಂದ 2027–28ರ ಅವಧಿಯಲ್ಲಿ ವರಮಾನದ ಸಿಎಜಿಆರ್ ಶೇ 18ರಷ್ಟಿರುವ ನಿರೀಕ್ಷೆ ಇದೆ. ತೆರಿಗೆ ನಂತರದ ಲಾಭದ (ಪಿಎಟಿ) ಸಿಎಜಿಆರ್ ಶೇ 23ರಷ್ಟಾಗಲಿದೆ ಎಂದು ಹೇಳಿದೆ.
ರಕ್ಷಣಾ ವಲಯದ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಎಎಂಪಿಎಲ್‌ಗೆ ದೀರ್ಘಾವಧಿ ಅವಕಾಶ ಇದೆ. ರಕ್ಷಣಾ ಸಚಿವಾಲಯ ಮತ್ತು ಸರ್ಕಾರಿ ಸ್ವಾಮ್ಯದ ರಕ್ಷಣಾ ಕಂಪನಿಗಳಿಂದ ಹೆಚ್ಚಿನ ಕಾರ್ಯಾದೇಶ ಲಭ್ಯವಾಗಲಿದೆ. ಹೀಗಾಗಿ 2026–27ರಿಂದ 2029–30ರಲ್ಲಿ ಕಂಪನಿಯ ವರಮಾನ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಹೇಳಿದೆ.
ಬುಧವಾರದ ವಹಿವಾಟಿನ ಅಂತ್ಯದ ವೇಳೆಗೆ ಅಸ್ಟ್ರಾ ಮೈಕ್ರೊವೇವ್ ಪ್ರಾಡಕ್ಟ್ಸ್ ಲಿಮಿಟೆಡ್‌ನ ಷೇರಿನ ಬೆಲೆ ₹893.35 ಇದೆ.
(ಬ್ರೋಕರೇಜ್ ಕಂಪನಿಗಳು ನೀಡುವ ವಿವರ, ಮಾಹಿತಿಗೆ ಪತ್ರಿಕೆ ಹೊಣೆಯಲ್ಲ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.