ADVERTISEMENT

ಸೆಬಿ ಅಧ್ಯಕ್ಷ ಹುದ್ದೆಗೆ ಅರ್ಜಿ: 2022ರ ಫೆಬ್ರುವರಿಗೆ ತ್ಯಾಗಿ ಸೇವಾ ಅವಧಿ ಅಂತ್ಯ

ಪಿಟಿಐ
Published 30 ಅಕ್ಟೋಬರ್ 2021, 10:49 IST
Last Updated 30 ಅಕ್ಟೋಬರ್ 2021, 10:49 IST
ಅಜಯ್ ತ್ಯಾಗಿ
ಅಜಯ್ ತ್ಯಾಗಿ   

ನವದೆಹಲಿ: ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಅಧ್ಯಕ್ಷ ಅಜಯ್‌ ತ್ಯಾಗಿ ಅವರ ಸೇವಾ ಅವಧಿಯು 2022ರ ಫೆಬ್ರುವರಿಯಲ್ಲಿ ಮುಕ್ತಾಯ ಆಗಲಿದೆ. ಹೀಗಾಗಿ ಕೇಂದ್ರ ಹಣಕಾಸು ಸಚಿವಾಲಯವು ಆ ಸ್ಥಾನಕ್ಕೆ ಅರ್ಜಿ ಆಹ್ವಾನಿಸಿದೆ.

ಸಚಿವಾಲಯವು ಅಕ್ಟೋಬರ್‌ 28ರಂದು ಹೊರಡಿಸಿರುವ ಸಾರ್ವಜನಿಕ ಪ್ರಕಟಣೆಯಂತೆ, ಸೆಬಿ ಅಧ್ಯಕ್ಷ ಸ್ಥಾನಕ್ಕೆ ಗರಿಷ್ಠ ಐದು ವರ್ಷಗಳು ಅವಧಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಡಿಸೆಂಬರ್‌ 6ರ ಒಳಗಾಗಿ ಸೂಕ್ತ ದಾಖಲೆಪತ್ರಗಳೊಂದಿಗೆ ಅರ್ಜಿ ಸಲ್ಲಿಸುವಂತೆ ತಿಳಿಸಲಾಗಿದೆ.

ಹಿಮಾಚಲ ಪ್ರದೇಶ ಕೇಡರ್‌ನ1984ರ ಬ್ಯಾಚ್‌ನ ಐಎಎಸ್‌ ಅಧಿಕಾರಿ ಆಗಿರುವ ತ್ಯಾಗಿ ಅವರು 2017ರ ಮಾರ್ಚ್‌ 1ರಂದು ಸೆಬಿ ಅಧ್ಯಕ್ಷರಾಗಿ ಮೂರು ವರ್ಷಗಳ ಅವಧಿಗೆ ನೇಮಕಗೊಂಡರು. ಆ ಬಳಿಕ ಅಧಿಕಾರಾವಧಿಯನ್ನು 2020ರ ಆಗಸ್ಟ್‌ವರೆಗೆ ಆರು ತಿಂಗಳವರೆಗೆ ವಿಸ್ತರಣೆ ಮಾಡಲಾಯಿತು. ನಂತರ ಅವರ ಸೇವಾವಧಿಯನ್ನು 18 ತಿಂಗಳು ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿತು. ಇದರಿಂದಾಗಿ 2022ರ ಫೆಬ್ರುವರಿಯಲ್ಲಿ ಅವರ ಸೇವಾ ಅವಧಿಯು ಮುಗಿಯಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.